ಎದೆ ನೋವಿನಿಂದ ಎ.ಆರ್.ರೆಹಮಾನ್ ಆಸ್ಪತ್ರೆಗೆ ದಾಖಲು: ವರದಿ
Update: 2025-03-16 10:20 IST
hindustantimes
ಚೆನ್ನೈ: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರನ್ನು ಗ್ರೀಮ್ಸ್ ರಸ್ತೆಯಲ್ಲಿರುವ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು India Today ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎ.ಆರ್.ರೆಹಮಾನ್(58) ಅವರನ್ನು ಇಂದು ಬೆಳಗ್ಗೆ 7.30ರ ವೇಳೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಇಸಿಜಿ ಹಾಗೂ ಇಕೊಕಾರ್ಡಿಯೊಗ್ರಾಮ್ ಸೇರಿದಂತೆ ಕೆಲವು ಪರೀಕ್ಷೆಗಳನ್ನು ನಡೆಸಲಾಯಿತು. ಅವರಿಗೆ ಆ್ಯಂಜಿಯೋಗ್ರಾಮ್ ಮಾಡಬೇಕಾಗಬಹುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಚೆನ್ನೈನಲ್ಲಿ ನಡೆದಿದ್ದ ಸಂಗೀತ ಕಚೇರಿಯಲ್ಲಿ ಈದ್ ಶೀರನ್ ರೊಂದಿಗೆ ಎ.ಆರ್.ರೆಹಮಾನ್ ಸಂಗೀತ ಪ್ರದರ್ಶನ ನೀಡಿದ್ದರು. ಇದಾದ ಒಂದು ವಾರದ ನಂತರ, ತಮ್ಮ ಸಂಗೀತ ಸಂಯೋಜನೆಯಿರುವ ‘ಛಾವಾ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.