×
Ad

ದಿಲ್ಲಿಯ ಅತಿ ಕಿರಿಯ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿರುವ ಅತಿಶಿ

Update: 2024-09-21 11:50 IST

 ಅತಿಶಿ ಸಿಂಗ್‌ (Photo: indiatoday.in)

ಹೊಸದಿಲ್ಲಿ: ಇಂದು (ಶನಿವಾರ) ಸಂಜೆ 4.30 ಗಂಟೆಗೆ ರಾಜಭವನದಲ್ಲಿ ಐವರು ಸಚಿವ ಸಹೋದ್ಯೋಗಿಗಳೊಂದಿಗೆ ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಸಿಂಗ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆ ಮೂಲಕ ದಿಲ್ಲಿಯ ಅತಿ ಕಿರಿಯ ಮುಖ್ಯಮಂತ್ರಿ ಎಂಬ ಹಿರಿಮೆಗೆ ಭಾಜನರಾಗಲಿದ್ದಾರೆ.

ಅತಿಶಿಯವರೊಂದಿಗೆ ಆಪ್ ಪಕ್ಷದ ಹಿರಿಯ ನಾಯಕರಾದ ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಸೌರಭ್ ಭಾರದ್ವಾಜ್ ಹಾಗೂ ಇಮ್ರಾನ್ ಹುಸೇನ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಸುಲ್ತಾನ್ ಪುರ್ ಮಾಜ್ರ ವಿಧಾನಸಭಾ ಕ್ಷೇತ್ರದಿಂದ ಪ್ರಪ್ರಥಮ ಬಾರಿಗೆ ಶಾಸಕರಾಗಿ ಚುನಾಯಿತರಾಗಿರುವ ದಲಿತ ನಾಯಕ ಮುಕೇಶ್ ಅಹ್ಲಾವತ್ ಕೂಡಾ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನೂತನ ಸಚಿವ ಸಂಪುಟದಲ್ಲಿ ಖಾತೆಗಳ ಮರು ಹಂಚಿಕೆಯಾಗಲಿದೆಯೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಹಿಂದಿನ ಕೇಜ್ರಿವಾಲ್ ಸಂಪುಟದಲ್ಲಿ ಅತಿಶಿಯೊಬ್ಬರೇ ಹಣಕಾಸು, ಕಂದಾಯ, ಲೋಕೋಪಯೋಗಿ, ಇಂಧನ ಮತ್ತು ಶಿಕ್ಷಣ ಸೇರಿದಂತೆ ಒಟ್ಟು 13 ಖಾತೆಗಳನ್ನು ಹೊಂದಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News