×
Ad

ಐಐಎಸ್ಸಿ ಬೆಂಗಳೂರು ಕ್ಯಾಂಪಸ್ ನೊಳಗೆ ತೀಸ್ತಾ ಸೆಟಲ್ವಾಡ್ ಪ್ರವೇಶಕ್ಕೆ ತಡೆ ಯತ್ನ: ವರದಿ

Update: 2023-08-17 10:23 IST

ಹೊಸದಿಲ್ಲಿ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಯ ಸಂಸ್ಥೆಯ ಭದ್ರತಾ ಸಿಬ್ಬಂದಿಯು ಕ್ಯಾಂಪಸ್ ಒಳಗೆ ಪ್ರವೇಶಿಸದಂತೆ ತಡೆಯುವ ಪ್ರಯತ್ನ ಮಾಡಿದ್ದು, ಸಂಸ್ಥೆಯ ಅಧ್ಯಾಪಕರು ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಬೇಕಾಯಿತು ಎಂದು Telegraph ವರದಿ ಮಾಡಿದೆ.

"ಕೋಮುವಾದಿ ಸಾಮರಸ್ಯ ಮತ್ತು ನ್ಯಾಯ" ಎಂಬ ಹೆಸರಿನಲ್ಲಿ ಸೆಟಲ್ವಾಡ್ ಅವರ ಭಾಷಣವನ್ನು ಐಐಎಸ್ಸಿಯಲ್ಲಿ ವಿದ್ಯಾರ್ಥಿಗಳ ಗುಂಪು ಬುಧವಾರ ಆಯೋಜಿಸಿತ್ತು. ಸೆಟಲ್ವಾಡ್ ಅವರು ಸಂಜೆ 5 ಗಂಟೆಗೆ ಭಾಷಣ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೆಲವೇ ಗಂಟೆಗಳ ಮೊದಲು ಸೆಟಲ್ವಾಡ್ ಗೆ ಸಂಸ್ಥೆಯೊಳಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಹೇಳಲಾಯಿತು ಎಂದು ಬೋಧಕವರ್ಗದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಸಂಸ್ಥೆಯ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ಆರಂಭದಲ್ಲಿ ಸೆಟಲ್ವಾಡ್ ರಿಗೆ ಪ್ರವೇಶವನ್ನು ನಿರಾಕರಿಸಿದರು. ಆಗ ಬೋಧಕವರ್ಗದ ಸದಸ್ಯರು ಸೆಟಲ್ವಾಡ್ ರನ್ನು ಒಳಗೆ ಬರಲು ಅನುಮತಿಸಬೇಕೆಂದು ತಿಳಿಸಿದರು ಎಂದು ಬೋಧಕವರ್ಗದ ಸದಸ್ಯರು ಹೇಳಿದರು.

ಸೆಟಲ್ವಾಡ್ ಅವರ ಭಾಷಣವು ಯೋಜನೆಯಂತೆ ಸಭಾಂಗಣದಲ್ಲಿ ನಡೆಯದೆ ಕ್ಯಾಂಪಸ್ ಕ್ಯಾಂಟೀನ್ ನಲ್ಲಿ ನಡೆಯಿತು.

 "ವಿದ್ಯಾರ್ಥಿಗಳ ಗುಂಪು ಹಲವಾರು ದಿನಗಳ ಹಿಂದೆ ಈ ಭಾಷಣಕ್ಕೆ ಅನುಮತಿ ಕೋರಿದ್ದರೂ ಈ ಕಾರ್ಯಕ್ರಮವನ್ನು ನಿರ್ಬಂಧಿಸುವ ಪ್ರಯತ್ನ ನಡೆಯಿತು. ಐಐಎಸ್ಸಿ ಹೊರಗೆ ಅನೇಕ ಜನರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರವೇಶವನ್ನು ನಿರಾಕರಿಸಿದ್ದನ್ನು ನಾವು ಗಮನಿಸಿದ್ದೇವೆ ಎಂದು ಭಾಷಣಕ್ಕೆ ಹಾಜರಾದ ಅಧ್ಯಾಪಕ ಸದಸ್ಯರು Telegraph ಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News