×
Ad

ಶುಭಾಂಶು ಶುಕ್ಲಾ ಗಗನಯಾತ್ರೆಯ ಆ್ಯಕ್ಸಿಯಮ್ 4 ಉಡಾವಣೆ ಮತ್ತೆ ವಿಳಂಬ

Update: 2025-06-20 07:30 IST

PC: x.com/airnewsalerts

ಹೊಸದಿಲ್ಲಿ: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಪೋಲಂಡ್ ಹಾಗೂ ಹಂಗೇರಿ ತಂತ್ರಜ್ಞರನ್ನು ಹೊತ್ತೊಯ್ಯಬೇಕಿದ್ದ ಮಹತ್ವಾಕಾಂಕ್ಷಿ ಆ್ಯಕ್ಸಿಯಂ ಮಿಷನ್ 4 ಉಡಾವಣೆಯನ್ನು ನಾಸಾ ಮತ್ತೆ ಮುಂದೂಡಿದೆ. ಜೂನ್ 22ರಂದು ಭಾನುವಾರ ಉಡಾವಣೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ಮುಂದಿನ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ನಾಸಾ ಹೇಳಿದೆ.

"ಜೂನ್ 22ರಂದು ಉಡಾವಣೆ ಮಾಡುವ ನಿರ್ಧಾರದಿಂದ ನಾಸಾ ಹಿಂದೆ ಸರಿದಿದೆ. ಮುಂದಿನ ದಿನಗಳಲ್ಲಿ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು" ಎಂದು ಆ್ಯಕ್ಸಿಯಮ್ ಸ್ಪೇಸ್ ಹೇಳಿಕೆ ನೀಡಿದೆ.

"ಐಎಸ್ಎಸ್ ನ ಝ್ವೆಡಾ ಸರ್ವೀಸ್ ಮಾಡ್ಯೂಲ್ ದುರಸ್ತಿ ಕಾರ್ಯದ ಮೌಲ್ಯಮಾಪನಕ್ಕೆ ಇನ್ನಷ್ಟು ಹೆಚ್ಚಿನ ಸಮಯಾವಕಾಶ ಅಗತ್ಯವಿದೆ. ಬಾಹ್ಯಾಕಾಶ ಕೇಂದ್ರದ ಜತೆ ಬಾಹ್ಯಾಕಾಶ ನೌಕೆಯ ಹಲವು ಸಿಸ್ಟಂಗಳು ನಿಕಟ ಸಂಪರ್ಕ ಹೊಂದಿದ್ದು, ಹೊಸ ಗಗನಯಾತ್ರಿಗಳ ತಂಡಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಸರ್ವಸನ್ನದ್ಧ ವ್ಯವಸ್ಥೆಯನ್ನು ಎಂಜಿನಿಯರ್ ಗಳು ಖಾತರಿಪಡಿಸಲು ಬಯಸಿದ್ದಾರೆ" ಎಂದು ನಾಸಾ ವಿವರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News