ನಾಳೆ(ಜೂ.27)ಯಿಂದ ಎಕ್ಸ್ ನಲ್ಲಿ ಜಾಹೀರಾತಿಗೆ ಹ್ಯಾಶ್ ಟ್ಯಾಗ್ ಬಳಕೆಗೆ ನಿಷೇಧ: ಎಲಾನ್ ಮಸ್ಕ್ ಘೋಷಣೆ
ಎಲಾನ್ ಮಸ್ಕ್ | PC : X
ಕ್ಯಾಲಿಫೋರ್ನಿಯಾ: “ನಾಳೆಯಿಂದ (ಶುಕ್ರವಾರ) ಪಾವತಿ ಮಾಡಿದ ಜಾಹೀರಾತುಗಳಲ್ಲಿ ಹ್ಯಾಶ್ ಟ್ಯಾಗ್ ಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿರುವ ಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್, ‘ಅದೊಂದು ಅಲಂಕಾರಿಕ ದುಸ್ವಪ್ನ’ ಎಂದೂ ಕರೆದಿದ್ದಾರೆ. ಆದರೆ, ಈ ನಿಷೇಧವನ್ನು ಜಾಹೀರಾತುಗಳ ಮೇಲೆ ವಿಧಿಸಲಾಗುವುದೇ ಹೊರತು, ಸಾಮಾನ್ಯ ಬಳಕೆದಾರರ ಮೇಲಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಎಕ್ಸ್ ಬಳಕೆದಾರರು ಜಾಹೀರಾತು ತುಣುಕುಗಳಿಗೆ ಹೊಂದಿಕೆಯಾಗುವಂಥ ಹಾಗೂ ಬಳಕೆದಾರರನ್ನು ಗುರಿಯಾಗಿಸಿಕೊಳ್ಳುವಂಥ ಸೂಕ್ತ ಹಾಗೂ ನಿರ್ದಿಷ್ಟ ಹ್ಯಾಶ್ ಟ್ಯಾಗ್ ಗಳನ್ನು ಬಳಸುತ್ತಾರೆ. ಅವರು ಕೆಲವೊಮ್ಮೆ ಬ್ರ್ಯಾಂಡ್ ಜಾಗೃತಿ ಮೂಡಿಸಲು ಹಾಗೂ ಬಳಕೆದಾರರ ಚಾಲಿತ ತುಣುಕುಗಳನ್ನು ಪ್ರೋತ್ಸಾಹಿಸಲು ವಿಶಿಷ್ಟ ಬ್ರ್ಯಾಂಡೆಡ್ ಹ್ಯಾಶ್ ಟ್ಯಾಗ್ ಗಳನ್ನು ಬಳಸುತ್ತಾರೆ.
ಜಾಹೀರಾತುಗಳ ಗೋಚರತೆಯನ್ನು ಹೆಚ್ಚಿಸಲು ಹಾಗೂ ವ್ಯಾಪಕ ಪ್ರಮಾಣದ ಬಳಕೆದಾರರನ್ನು ತಲುಪಲು ಮತ್ತು ಯಾವ ಅಭಿಯಾನ ಹೆಚ್ಚು ಬಳಕೆದಾರರನ್ನು ಆಕರ್ಷಿಸಿದೆ ಹಾಗೂ ವ್ಯಾಪಾರವಾಗಿ ಮಾರ್ಪಟ್ಟಿದೆ ಎಂಬುದನ್ನು ಕಂಡುಕೊಳ್ಳಲು ಹ್ಯಾಶ್ ಟ್ಯಾಗ್ ಬಳಸಲಾಗುತ್ತದೆ.