×
Ad

ಹೆಡ್ ಫೋನ್ ಹಾಕಿಕೊಳ್ಳುವ ಮುನ್ನ…

Update: 2025-03-11 22:08 IST

ಸಾಂದರ್ಭಿಕ ಚಿತ್ರ | PC : freepik.com

ಹೆಡ್ ಫೋನ್ ಬಳಸುವ ಮೊದಲು ನೀವು ಈ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ನೀವು ಕಿವುಡರಾಗುವ ಅಪಾಯವೂ ಇದೆ. ನಿಮ್ಮ ಕಿವಿಯ ಹಾಗು ಒಟ್ಟು ದೇಹದ ಅರೋಗ್ಯ ಕಾಪಾಡಿಕೊಳ್ಳಲು ಹೆಡ್ ಫೋನ್ ಬಳಸುವಾಗ ಈ ಅಂಶಗಳತ್ತ ಗಮನವಿರಲಿ.

ಹೇಳೀ ಕೇಳಿ ಶಬ್ದಮಯ ಜಗತ್ತು ನಮ್ಮದು. ನಮ್ಮ ಸುತ್ತಲೂ ತುಂಬಾ ಶಬ್ದವಿದೆ. ಜನರ ಮಾತು, ವಾಹನಗಳ ಓಡಾಟದ ಸದ್ದು, ಅವುಗಳ ಹಾರ್ನ್ಗಳು. ಹೀಗೆ ಕೊನೆಯಿಲ್ಲದ ಸದ್ದಿನ ಹಾವಳಿಯಲ್ಲಿ ಹೈರಾಣಾಗುತ್ತೇವೆ.

ಈ ಯಾವ ಶಬ್ದವೂ ಕಿವಿಗೆ ಬಿಳಲೇಕೂಡದೆಂದು ಕೆಲವರು ಪರಿಹಾರ ಹುಡುಕಿಕೊಂಡು ಹೋಗುತ್ತಾರೆ. ಶಬ್ದವೇ ಕೇಳಿಸದಂತೆ ಮಾಡುವ ಹೆಡ್ಫೋನ್ಗಳನ್ನು ಬಳಸುತ್ತಾರೆ. ಅಂಥ ವಿಶೇಷ ಹೆಡ್ಫೋನ್ಗಳನ್ನು ಫೋನ್ಗೆ ಕನೆಕ್ಟ್ ಮಾಡಿಕೊಂಡು ಕಿವಿಗೆ ಹಾಕಿಕೊಂಡರೆ ಮುಗಿಯಿತು. ಜಗತ್ತಿನ ಯಾವ ಶಬ್ದವೂ ಕಿವಿಗೆ ಬೀಳುವುದಿಲ್ಲ.

ಅವರದೆ ಲೋಕದಲ್ಲಿ ಮೈಮರೆಯಬಹುದು. ಆದರೆ ಈ ಹೆಡ್ಫೋನ್ಗಳು ಎಂಥವು, ಅವು ಹೇಗೆ ಕೆಲಸಮಾಡುತ್ತವೆ ಮತ್ತು ಅವುಗಳನ್ನು ದೀರ್ಘ ಕಾಲದವರೆಗೆ ಬಳಸುವುದರಿಂದ ನಮ್ಮ ಶ್ರವಣ ಸಾಮರ್ಥ್ಯದ ಮೇಲೆ ಉಂಟಾಗುವ ಪರಿಣಾಮಗಳೇನು? ಇವನ್ನು ತಿಳಿದುಕೊಳ್ಳುವುದು ಅವಶ್ಯ.

ಈ ವಾಯ್ಸ್ ಕ್ಯಾನ್ಸಲಿಂಗ್ ಹೆಡ್ಫೋನ್ಗಳ ಅನನುಕೂಲಗಳು ಏನೇನು ಮತ್ತು ಅವುಗಳನ್ನು ಬಳಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದಿರಲೇಬೇಕು.

ಇಂಥ ಹೆಡ್ಫೋನ್ಗಳಲ್ಲಿ ಮೂರು ಭಾಗಗಳಿರುತ್ತವೆ. ಮೊದಲ ಭಾಗ, ಅದರ ಮೈಕ್ರೊಫೋನ್. ಮೈಕ್ರೊಫೋನ್ನಲ್ಲಿ ಹಿನ್ನೆಲೆ ಶಬ್ದವನ್ನು ಎತ್ತಿಕೊಳ್ಳುವ ಸಣ್ಣ ಮೈಕ್ಗಳಿವೆ. ಎರಡನೇ ಭಾಗ, ಪ್ರೊಸೆಸರ್. ಪ್ರೊಸೆಸರ್ ಶಬ್ದ ವಿರೋಧಿ ಧ್ವನಿ ತರಂಗಗಳನ್ನು ಉತ್ಪಾದಿಸುತ್ತದೆ ಮತ್ತು ಆ ಧ್ವನಿ ತರಂಗ ಹಿನ್ನೆಲೆಯಲ್ಲಿನ ಶಬ್ದ ಕೇಳಿಸದ ಹಾಗೆ ಮಾಡುತ್ತದೆ. ಮೂರನೇ ಭಾಗ, ಸ್ಪೀಕರ್. ಸ್ಪೀಕರ್ನಲ್ಲಿ, ಆಡಿಯೋ ಏಕಕಾಲದಲ್ಲಿ ಪ್ಲೇ ಆಗುತ್ತದೆ ಮತ್ತು ಅದೇ ಸಮಯದಲ್ಲಿ ಶಬ್ದ ವಿರೋಧಿ ಧ್ವನಿ ತರಂಗಗಳು ಸಹ ಪ್ಲೇ ಆಗುತ್ತಲೇ ಇರುತ್ತವೆ.

ಈ ರೀತಿಯಾಗಿ ಅದು ಹಿನ್ನೆಲೆ ಶಬ್ದ ಕೇಳಿಸದಂತೆ ಮಾಡುತ್ತದೆ. ಸಾಮಾನ್ಯವಾಗಿ ಇಂಥ ಹೆಡ್ಫೋನ್ಗಳು ಸುರಕ್ಷಿತವಾಗಿರುತ್ತವಾದರೂ, ಅವುಗಳನ್ನು ದೀರ್ಘಕಾಲ ಬಳಸುವುದು ನಮ್ಮ ಕೇಳುವಿಕೆ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೆಚ್ಚಿನ ಪ್ರಮಾಣದಲ್ಲಿ ಬಳಸಿದಾಗ ಅದು ಶ್ರವಣ ಸಾಮರ್ಥ್ಯದಲ್ಲಿ ದೌರ್ಬಲ್ಯವನ್ನು ಉಂಟುಮಾಡಬಹುದು.

ಶ್ರವಣ ನರ ದುರ್ಬಲಗೊಳ್ಳುವುದರಿಂದ ವ್ಯಕ್ತಿಯ ಶ್ರವಣ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದನ್ನು ಶ್ರವಣೇಂದ್ರಿಯ ವೈಫಲ್ಯ ಎಂದು ಕರೆಯಲಾಗುತ್ತದೆ. ಇದರ ಬಳಕೆಯಿಂದಾಗಿ ಅನೇಕರು ತಮ್ಮ ಕಿವಿಗಳಲ್ಲಿ ವಿಚಿತ್ರ ರೀತಿಯ ಒತ್ತಡ ಅನುಭವಿಸುತ್ತಾರೆ. ಮತ್ತು ಆ ಒತ್ತಡ ಕಿವಿಗಳಲ್ಲಿ ಅಸ್ವಸ್ಥತೆಗೆ ಕಾರಣವಾಗುತ್ತದೆ.

ಅದು ಉತ್ಪಾದಿಸುವ ಶಬ್ದ ನಿರೋಧಕ ಧ್ವನಿ ತರಂಗಗಳೇ ಕಿವಿಗಳೊಳಗೆ ಒತ್ತಡ ಉಂಟುಮಾಡಿ, ತುಂಬಾ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಅದರಿಂದಾಗಿ ಅನೇಕರಲ್ಲಿ ತಲೆ ತಿರುಗುವಿಕೆ ಕೂಡ ಕಾಣಿಸಿಕೊಳ್ಳಬಹುದು.

ಮೆದುಳು ಶಬ್ದ ವಿರೋಧಿ ಧ್ವನಿ ತರಂಗಕ್ಕೆ ಹೊಂದಿಕೊಳ್ಳಬೇಕಾಗಿರುವುದರಿಂದ, ಹೀಗೆ ತಲೆ ತಿರುಗುವಿಕೆ ಉಂಟಾಗುತ್ತದೆ. ಇದನ್ನು ದೀರ್ಘ ಕಾಲದವರೆಗೆ ಬಳಸಿದಾಗ, ಹೊರ ಪರಿಸರದ ಬಗ್ಗೆ ಪ್ರಜ್ಞೆ ಕಡಿಮೆಯಾಗುತ್ತದೆ. ಅಂದರೆ, ಅವರು ಸುತ್ತಮುತ್ತಲಿನ ಪರಿಸರದ ಬಗ್ಗೆ ಅರಿವೇ ಇಲ್ಲದವರಂತಾಗುತ್ತಾರೆ.

ಅದರ ಧ್ವನಿ ಪ್ರಮಾಣ ಬಗ್ಗೆ ಯಾವಾಗಲೂ ಗಮನ ಕೊಡಬೇಕು. ಧ್ವನಿ ಪ್ರಮಾಣ ತುಂಬಾ ಜೋರಾಗಿದೆಯೋ ಇಲ್ಲವೋ ಎಂಬುದನ್ನು ಗಮನಿಸಬೇಕು.

ಇಲ್ಲಿ ಪಾಲಿಸಬೇಕಿರುವುದು ಸಾಮಾನ್ಯವಾಗಿ 60 ಬೈ 60 ನಿಯಮ. ಅಂದರೆ, 60 ಕ್ಕಿಂತ ಕಡಿಮೆ ಧ್ವನಿ ಪ್ರಮಾಣ ನಲ್ಲಿ ಆಡಿಯೊವನ್ನು ಕೇಳಬೇಕು. ಆ ಮೂಲಕ ನಮ್ಮ ಧ್ವನಿಯನ್ನು ಕಾಪಾಡಿಕೊಳ್ಳಬಹುದು. ಎರಡನೆಯದಾಗಿ ಅದನ್ನು 60 ನಿಮಿಷಗಳಿಗಿಂತ ಹೆಚ್ಚು ಕಾಲ ಬಳಸಬಾರದು.

ದೀರ್ಘ ಕಾಲದವರೆಗೆ ಬಳಸಬೇಕಾದಾಗ, ಕಿವಿಗೆ ಆಯಾಸ ಉಂಟಾಗದಂತೆ ಮತ್ತು ಶ್ರವಣ ನರಗಳು

ದುರ್ಬಲಗೊಳ್ಳದಂತೆ ಪ್ರತಿ ಗಂಟೆಗೊಮ್ಮೆ ವಿರಾಮ ತೆಗೆದುಕೊಳ್ಳುವುದು ಮುಖ್ಯ. ಮೂರನೆಯದಾಗಿ, ಅದನ್ನು ಸ್ವಚ್ಛವಾಗಿಡುವುದು ಕೂಡ ಅಷ್ಟೇ ಅಗತ್ಯ. ಅದನ್ನು ಪದೇ ಪದೇ ಸ್ವಚ್ಛಗೊಳಿಸಬೇಕು.

ಏಕೆಂದರೆ ಅದರ ಕಿವಿ ಪ್ಯಾಡ್ಗಳು ಮತ್ತು ಹೊರಭಾಗಗಳಲ್ಲಿ ಕೊಳಕು ಸಂಗ್ರಹವಾಗುತ್ತದೆ. ರಸ್ತೆಯಲ್ಲಿ ನಡೆಯುವಾಗ ಅದನ್ನು ಬಳಸದೇ ಇರುವುದು ಒಳ್ಳೆಯದು. ರಸ್ತೆಯಲ್ಲಿ ಅದನ್ನು ಬಳಸುವುದರಿಂದ, ಹೊರಗಿನ ಶಬ್ದಗಳು ಕೇಳಿಸುವುದಿಲ್ಲವಾದ್ದರಿಂದ ಅಪಘಾತದ ಸಾಧ್ಯತೆಗಳು ಜಾಸ್ತಿ.

ಅಲ್ಲದೆ, ಹಲವಾರು ಗಂಟೆಗಳ ಕಾಲ ಖಂಡಿತ ಅವುಗಳ ಬಳಕೆ ಬೇಡ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News