×
Ad

ಬಿಹಾರ |‘ನ್ಯಾಯ ಯಾತ್ರೆ’ಯಲ್ಲಿ ಪಾಲ್ಗೊಂಡ ತೇಜಸ್ವಿ ಯಾದವ್‌

Update: 2024-02-16 20:30 IST

Photo: X@yadavtejashwi

ಸಸಾರಾಮ್: ಬಿಹಾರದ ಸಸಾರಾಮ್ ಜಿಲ್ಲೆಯಿಂದ ಶುಕ್ರವಾರ ಪುನರಾರಂಭಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ಭಾರತ ಜೋಡೊ ನ್ಯಾಯ ಯಾತ್ರೆ’ಯಲ್ಲಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್‌ ಪಾಲ್ಗೊಂಡಿದ್ದರು.

ಎಸ್ ಯು ವಿ ಕಾರಿನ ಮೇಲ್ಛಾವಣಿಯ ಮೇಲೆ ಕುಳಿತಿದ್ದ ಯಾದವ್‌ ಮತ್ತು ರಾಹುಲ್ ಅದು ನಿಧಾನವಾಗಿ ಮುಂದಕ್ಕೆ ಸಾಗುತ್ತಿದ್ದಂತೆ ರಸ್ತೆ ಬದಿಯಲ್ಲಿ ನೆರೆದಿದ್ದ ಜನಸ್ತೋಮದತ್ತ ಕೈಗಳನ್ನು ಬೀಸಿದರು. ಅಪರಾಹ್ನ ಉಭಯ ನಾಯಕರು ಕೈಮೂರ್ನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಯಾತ್ರೆಯು ಶುಕ್ರವಾರ ತಡಸಂಜೆಯ ವೇಳೆಗೆ ಕೈಮೂರ್ ಜಿಲ್ಲೆಯ ಮೊಹಾನಿಯಾ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News