×
Ad

ರಾಷ್ಟ್ರಗೀತೆ ಮೊಳಗುವ ವೇಳೆ ಬಿಹಾರ ಸಿಎಂ ಅಶಿಸ್ತಿನ ವರ್ತನೆ !

Update: 2025-03-21 07:44 IST

PC: screengrab/x.com/yadavtejashwi

ಪಾಟ್ನಾ: ನಗರದಲ್ಲಿ ಗುರುವಾರ ನಡೆದ ಕ್ರೀಡಾಕೂಟವೊಂದರಲ್ಲಿ ರಾಷ್ಟ್ರಗೀತೆ ಮೊಳಗುತ್ತಿರುವ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕಮಾರ್ ನಗುತ್ತಾ ಅಗೌರವ ತೋರಿರುವ ದೃಶ್ಯ ತುಣುಕುಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಯ ಬೆನ್ನಲ್ಲೇ ವಿರೋಧ ಪಕ್ಷಗಳು ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿವೆ. ನಿತೀಶ್ ಸರ್ಕಾರದಲ್ಲಿ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್, "ಇದು ರಾಜ್ಯ ಮತ್ತು ರಾಷ್ಟ್ರಕ್ಕೆ ಮಾಡಿದ ಅವಮಾನ" ಎಂದಿದ್ದಾರೆ.

ಪಾಟ್ನಾದ ಪಾಟಲೀಪುತ್ರ ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ಸೆಪಕ್ಟಕ್ರಾ ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ವೇಳೆ ನಿತೀಶ್ ಕುಮಾರ್ ಅವರು ವೇದಿಕೆಯಲ್ಲೇ ಇದ್ದಐಎಎಸ್ ಅಧಿಕಾರಿ ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಜತೆ ನಗುತ್ತಾ ಮತನಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಧಿಕಾರಿಯ ಗಮನ ಸೆಳೆಯಲು ಮೈ ಮುಟ್ಟುತ್ತಿರುವುದು ಕಾಣಿಸುತ್ತಿದೆ. ಒಂದು ಹಂತದಲ್ಲಿ ಸಭೆಯಲ್ಲಿದ್ದ ಪ್ರೇಕ್ಷಕರತ್ತ ನಕ್ಕು ಕೈಮುಗಿದು ನಮಸ್ಕರಿಸುತ್ತಿದ್ದಾರೆ. ದೀಪಕ್ ಕುಮಾರ್ ಅವರು ಮುಖ್ಯಮಂತ್ರಿಗಳೊಂದಿಗೆ ನಿಶ್ಶಬ್ದವಾಗಿ ಇರುವಂತೆ ಸನ್ನೆ ಮಾಡುತ್ತಿದ್ದಾರೆ.

"ಗೌರವಾನ್ವಿತ ಮುಖ್ಯಮಂತ್ರಿಗಳೇ ಕನಿಷ್ಠ, ರಾಷ್ಟ್ರಗೀತೆಗೆ ಅವಮಾನ ಮಾಡಬೇಡಿ.ನೀವು ಯುವಕರನ್ನು, ವಿದ್ಯಾರ್ಥಿಗಳನ್ನು, ಮಹಿಳೆಯರನ್ನು ಮತ್ತು ವೃದ್ಧರನ್ನು ಪ್ರತಿದಿನ ಅವಮಾನಿಸುತ್ತಿದ್ದೀರಿ. ಮಹಾತ್ಮಾಗಾಂಧೀಜಿಯವರ ಹುತಾತ್ಮ ದಿನಾಚರಣೆ ಸಂದರ್ಭದಲ್ಲಿ ನೀವು ಚಪ್ಪಾಳೆ ತಟ್ಟುವ ಮೂಲಕ ಅಣಕಿಸಿದ್ದೀರಿ. ಮತ್ತೆ ಕೆಲವೊಮ್ಮೆ ರಾಷ್ಟ್ರಗೀತೆಗೆ ಚಪ್ಪಾಣೆ ತಟ್ಟುತ್ತೀರಿ' ಎಂದು ಯಾದವ್ ಎಕ್ಸ್ ಪೋಸ್ಟ್ನಲ್ಲಿ ಕುಟುಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News