ಬಿಹಾರ | ಮತದಾರರ ಅಧಿಕಾರ ಯಾತ್ರೆ ವೇಳೆ ಬೈಕ್ ಚಲಾಯಿಸಿದ ರಾಹುಲ್ ಗಾಂಧಿ, ತೇಜಸ್ವಿ ಯಾದವ್
Update: 2025-08-24 12:55 IST
ಪಾಟ್ನಾ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಬಿಹಾರದ ಪೂರ್ನಿಯಾದಲ್ಲಿ ಹಮ್ಮಿಕೊಂಡಿದ್ದ ʼವೋಟರ್ ಅಧಿಕಾರ್ ಯಾತ್ರೆʼಯ ವೇಳೆ ರವಿವಾರ ಬೈಕ್ ಚಲಾಯಿಸಿ ಗಮನ ಸೆಳೆದರು.
ಬಿಹಾರದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮಗಳ ಕುರಿತು ಜನಜಾಗೃತಿ ಮೂಡಿಸಲು ವೋಟರ್ ಅಧಿಕಾರ್ ಯಾತ್ರೆ ನಡೆಸುತ್ತಿರುವ ಈ ಇಬ್ಬರು ನಾಯಕರು ತಮ್ಮ ಯಾತ್ರೆಯ ವೇಳೆ ಬೈಕ್ ಚಲಾಯಿಸಿದರು.
ಈ ಯಾತ್ರೆಯು ಅರಾರಿಯಾ ತಲುಪುವುದಕ್ಕೂ ಮುನ್ನ, ಪಂಚುಮುಖಿ ಮಂದಿರ್, ಪೋರ್ಬ್ಸ್ ಗಂಜ್ ರಸ್ತೆ, ಹೋಪೆ ಆಸ್ಪತ್ರೆ ಚೌಕ, ರಾಮ್ ಬಾಗ್, ಕಸಬಾ ಬಝಾರ್, ಹಾಗೂ ಝೀರೊ ಮೈಲ್ ಮೂಲಕ ಹಾದು ಹೋಗಲಿದೆ. ಬಳಿಕ ಅರಾರಿಯಾದಲ್ಲಿ ರಾಹುಲ್ ಗಾಂಧಿ, ತೇಜಸ್ವಿ ಯಾದವ್, ಸಿಪಿಐ(ಎಂಎಲ್)-ಲಿಬರೇಷನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ವಿಕಾಸ್ ಶೀಲ್ ಇನ್ಸಾನ್ ಪಕ್ಷದ ಸಂಸ್ಥಾಪಕ ಮುಕೇಶ್ ಸಹಾನಿ ಅವರು ಪತ್ರಿಕಾ ಗೋಷ್ಠಿ ನಡೆಸಲಿದ್ದಾರೆ.