×
Ad

ಬಿಹಾರಿಗಳು ಇಷ್ಟು ಮುಂದುವರಿದಿದ್ದರೂ, ಬಿಹಾರವೇಕೆ ಹಿಂದುಳಿದಿದೆ? : ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಪ್ರಶ್ನೆ

Update: 2024-07-20 19:30 IST

ಚಿರಾಗ್ ಪಾಸ್ವಾನ್ | PTI 

ಹೊಸದಿಲ್ಲಿ: ಬಿಹಾರಿಗಳು ಇಷ್ಟು ಮುಂದುವರಿದಿದ್ದರೂ, ಬಿಹಾರವೇಕೆ ಇಷ್ಟು ಹಿಂದುಳಿದಿದೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ಕೇಂದ್ರ ಸಚಿವ ಹಾಗೂ ಲೋಕ್ ಜನಶಕ್ತಿ ಪಕ್ಷ(ರಾಮ್ ವಿಲಾಸ್)ದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅಭಿಪ್ರಾಯ ಪಟ್ಟಿದ್ದಾರೆ. ಬಿಹಾರಿಗಳು ರಾಜ್ಯದಿಂದ ವಲಸೆ ಹೋದ ನಂತರ, ಉನ್ನತ ಸರಕಾರಿ ಉದ್ಯೋಗಗಳಿಂದ ಹಿಡಿದು, ಖಾಸಗಿ ವಲಯದವರೆಗೆ ಉತ್ತಮ ಪ್ರಗತಿ ಸಾಧಿಸುತ್ತಿದ್ದಾರೆ ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.

ಅಪರಾಧ ಪ್ರಕರಣಗಳು ಹಾಗೂ ಇತ್ತೀಚೆಗೆ ಕುಸಿಯುತ್ತಿರುವ ಸೇತುವೆಗಳಿಗೆ ಸಂಬಂಧಿಸಿದಂತೆ ಪೂರ್ವನಿದರ್ಶನವಾಗುವಂತಹ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಬಿಹಾರ ಸರಕಾರವನ್ನು ಆಗ್ರಹಿಸಿದ್ದಾರೆ. ರಾಜ್ಯವು ಪ್ರಗತಿಯ ಏಣಿಯೇರಲು ಮುನ್ನೋಟದ ಅಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಒಂದು ಕಾಲದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಟು ಟೀಕಾಕಾರರಾಗಿದ್ದ ಚಿರಾಗ್ ಪಾಸ್ವಾನ್, ಬಿಜೆಪಿ ಮೈತ್ರಿಕೂಟದೊಂದಿಗೆ ಸೇರ್ಪಡೆಯಾದ ನಂತರ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷದೊಂದಿಗೆ ಒಟ್ಟಾಗಿ ಸ್ಪರ್ಧಿಸಲಿದ್ದಾರೆ. ಹೀಗಿದ್ದೂ, ರಾಜ್ಯದ ಪ್ರಗತಿಯ ಹಿನ್ನಡೆಗೆ ಕಾರಣವಾಗಿರುವ ಹಲವಾರು ಅಂಶಗಳ ಕುರಿತು ಅವರು ಬೆಳಕು ಚೆಲ್ಲಿದ್ದಾರೆ.

2025ರ ಅಂತ್ಯದಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News