×
Ad

ಉತ್ತರಾಖಂಡ: ಹಕ್ಕಿ ಬಡಿದು ವಿಮಾನಕ್ಕೆ ಹಾನಿ; ಪ್ರಯಾಣಿಕರು ಸುರಕ್ಷಿತ!

Update: 2025-11-24 07:51 IST

PC: PTI

ಹೊಸದಿಲ್ಲಿ: ಮುಂಬೈನಿಂದ ಉತ್ತರಾಖಂಡದ ಡೆಹ್ರಾಡೂನ್‍ಗೆ ಆಗಮಿಸಿದ ಇಂಡಿಗೊ ವಿಮಾನಕ್ಕೆ ಹೃಷಿಕೇಶ ಬಳಿಯ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ರನ್‍ವೇಯಲ್ಲಿ ಹಕ್ಕಿ ಬಡಿದು ವಿಮಾನಕ್ಕೆ ಹಾನಿಯಾಗಿದೆ. ಆದರೆ ಘಟನೆಯ ವೇಳೆ ವಿಮಾನದಲ್ಲಿದ್ದ ಎಲ್ಲ 186 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಪಾರಾದರು.

ಈ ಘಟನೆ ಸಂಜೆ 6.45ಕ್ಕೆ ಸಂಭವಿಸಿದ್ದು, ರನ್‍ವೇನಲ್ಲಿ ಇಂಡಿಗೊ ವಿಮಾನ ಐಜಿಓ 5032ರ ಮುಂಭಾಗಕ್ಕೆ ಹಕ್ಕಿ ಡಿಕ್ಕಿ ಹೊಡೆದು ವಿಮಾನದ ಮುಂಭಾಗಕ್ಕೆ ಹಾನಿಯಾಗಿದೆ.

ವಿಮಾನ ನಿಲ್ದಾಣದ ಅಧಿಕಾರಿಗಳು ಸಮಗ್ರ ತಪಾಸಣೆ ಕೈಗೊಂಡರು ಮತ್ತು ಘಟನೆ ಹಿನ್ನೆಲೆಯಲ್ಲಿ ರನ್‍ವೇ ಮೌಲ್ಯಮಾಪನ ಕೈಗೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News