×
Ad

ಬಿಜೆಪಿ ಧ್ವಜ ದುಷ್ಟಶಕ್ತಿಗಳನ್ನು ಓಡಿಸಬಲ್ಲದು: ಹರ್ಯಾಣ ಮಂತ್ರಿ

Update: 2024-04-11 08:29 IST

Photo: PTI

ಚಂಡೀಗಢ: ಜೆಪಿಪಿ ಧ್ವಜ ದುಷ್ಟಶಕ್ತಿಗಳನ್ನು ಓಡಿಸಬಲ್ಲ, ದೆವ್ವ ಬಿಡಿಸಬಲ್ಲ ಅಪೂರ್ವ ಶಕ್ತಿ ಹೊಂದಿದೆ ಎಂದು ಹರ್ಯಾಣ ಬಿಜೆಪಿ ಸಚಿವ ಕನ್ವರ್ ಪಾಲ್ ಚುನಾವಣಾ ಪ್ರಚಾರಕ್ಕೆ ಹೊಸ ಆಯಾಮ ನೀಡಿದ್ದಾರೆ. ಬಿಜೆಪಿಗೆ ಮತ ಹಾಕುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸಿದ ಅವರು ಈ  ಹೇಳಿಕೆ ನೀಡಿದರು.

"ಜಹಾಂ ಭಾರತೀಯ ಜನತಾ ಪಾರ್ಟಿ ಕಾ ಝಂಡಾ ಲಗೇಗಾ ವಹಾಂ ಸೇ ದುಷ್ಟ ಆತ್ಮಯಾಂ ಭೂತ ಪ್ರೇತ್ ಭಿ ದೂರ್ ರಹೇಗಾ" (ಬಿಜೆಪಿ ಧ್ವಜಗಳನ್ನು ಎಲ್ಲೆಲ್ಲಿ ಹಾಕುತ್ತೇವೆಯೋ ದುಷ್ಟಶಕ್ತಿಗಳು ಅಲ್ಲಿಂದ ದೂರ ಇರುತ್ತವೆ) ಎಂದರು.

ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಚಿವರು, "ಬಿಜೆಪಿಯ ಎಲ್ಲ ಕಾರ್ಯಕರ್ತರು ಕಮಲ ಇದ್ದಂತೆ; ಕೆಸರಿನಲ್ಲಿ ಬೆಳೆದರೂ ಪರಿಶುದ್ಧ ಹಾಗೂ ಸ್ವಚ್ಛ" ಎಂದು ಹೇಳಿದರು.

ಯಮುನಾನಗರ ಜಿಲ್ಲೆಯ ಜಗಧಾರಿ ಶಾಸಕರಾಗಿರುವ ಪಾಲ್, ಹರ್ಯಾಣ ಸಂಪುಟದಲ್ಲಿ ಅತ್ಯಂತ ಹಿರಿಯ ಸಚಿವ. 2014-19ರ ಅವಧಿಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಾಗ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯಾನಿರ್ವಹಿಸಿದ್ದರು. ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರದಲ್ಲಿ 2019ರಲ್ಲಿ ಶಿಕ್ಷಣ ಸಚಿವರಾದರು. ಮನೋಹರಲಾಲ್ ಖಟ್ಟರ್ ರಾಜೀನಾಮೆ ನೀಡಿದಾಗ ಅವರೂ ರಾಜೀನಾಮೆ ನೀಡಿದ್ದರು.ಆದರೆ ಹೊಸ ನಯಾಬ್ ಸೈನಿ ಸರ್ಕಾರದಲ್ಲಿ ಅವರು ಅತ್ಯಂತ ಹಿರಿಯ ಸಚಿವರಾಗಿ ಸೇರ್ಪಡೆಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News