×
Ad

ಹಿಂದೂ ಮಹಿಳೆಗೆ ಮುಸ್ಲಿಂ ವ್ಯಕ್ತಿಯ ರಕ್ತ ನೀಡಲು ನಿರಾಕರಿಸಿದ ವೈದ್ಯ!: ವಿಡಿಯೋ ವೈರಲ್

Update: 2024-09-10 16:33 IST

photoscreengrab | PC : X \ @WaqarHasan1231

ಮಧ್ಯಪ್ರದೇಶ: ಹಿಂದೂ ಮಹಿಳೆಗೆ ರಕ್ತ ನೀಡಲು ಮುಂದಾದ ಮುಸ್ಲಿಂ ವ್ಯಕ್ತಿಗೆ ವೈದ್ಯರು ಅನುಮತಿ ನಿರಾಕರಿಸಿದ್ದಾರೆನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪನ್ನಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪವನ್ ಸೋಂಕರ್ ಎಂಬಾತ ತನ್ನ ತಾಯಿಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ತೆರಳಿದ್ದಾನೆ. ಈ ವೇಳೆ ವೈದ್ಯರು ತುರ್ತಾಗಿ ರಕ್ತದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಸೋಂಕರ್ ಮುಸ್ಲಿಂ ಸಮುದಾಯಕ್ಕೆ ಸೇರಿದ ತನ್ನ ಸ್ನೇಹಿತನನ್ನು ರಕ್ತದಾನಿಯಾಗಿ ಆಸ್ಪತ್ರೆಗೆ ಕರೆತಂದಿದ್ದಾನೆ.

ಸೆ.8ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ವಿಡಿಯೋ ವೈರಲ್ ಆಗಿದೆ. ಕೆಲವು ಸೆಕೆಂಡುಗಳ ವಿಡಿಯೋ ದೃಶ್ಯಗಳಲ್ಲಿ ಸೋಂಕರ್ ಮತ್ತು ವೈದ್ಯರ ನಡುವಿನ ಸಂಭಾಷಣೆ ಕಂಡು ಬಂದಿದೆ. ಆಸ್ಪತ್ರೆಯ ಉದ್ಯೋಗಿ ಮತ್ತು ರೋಗಿಯ ಸಂಬಂಧಿಕರ ನಡುವಿನ ಸಂಭಾಷಣೆಯ ವಿವರಗಳನ್ನು ಸ್ಥಳೀಯ ಮಾಧ್ಯಮಗಳು ಕೂಡ ವರದಿ ಮಾಡಿದೆ.

'ಮುಸ್ಲಿಂ ವ್ಯಕ್ತಿಯ ರಕ್ತವನ್ನು ಹಿಂದೂ ರೋಗಿಗೆ ನೀಡಬಾರದು' ಎಂದು ವೈದ್ಯ ರಕ್ತದಾನಕ್ಕೆ ಅನುಮತಿ ನಿರಾಕರಿಸಿದ ವೀಡಿಯೊ ವೈರಲ್ ಆದ ಬೆನ್ನಲ್ಲಿ ವೈದ್ಯನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News