×
Ad

ಬಾಲಕಿಯರೊಂದಿಗೆ ಪ್ರೇಮ ಸಂಬಂಧ ಹೊಂದುವ ಬಾಲಕರನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಬಾರದು: ಉತ್ತರಾಖಂಡ ಹೈಕೋರ್ಟ್

Update: 2024-07-06 20:40 IST

ಸಾಂದರ್ಭಿಕ ಚಿತ್ರ

ಡೆಹ್ರಾಡೂನ್: ಅಪ್ರಾಪ್ತ ವಯಸ್ಕ ಬಾಲಕಿಯರೊಂದಿಗೆ ಪ್ರೇಮ ಸಂಬಂಧ ಹೊಂದುವ ಅಪ್ರಾಪ್ತ ವಯಸ್ಕ ಬಾಲಕರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಕ್ಸೊ)ಯಡಿ ಬಂಧಿಸಬಾರದು ಎಂದು ಉತ್ತರಾಖಂಡ ಹೈಕೋರ್ಟ್ ತನ್ನ ಇತ್ತೀಚಿನ ಆದೇಶದಲ್ಲಿ ಹೇಳಿದೆ.

ಬಾಲಕಿಯರೊಂದಿಗೆ ಪ್ರೇಮ ಸಂಬಂಧ ಹೊಂದುವ ಬಾಲಕರನ್ನು ಬಂಧಿಸುವ ವಿಷಯದ ಬಗ್ಗೆ ಪರಿಶೀಲನೆ ನಡೆಸುವಂತೆ ಸರಕಾರಕ್ಕೆ ನಿರ್ದೇಶನಗಳನ್ನು ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ರಿತು ಬಾಹ್ರಿ ಮತ್ತು ನ್ಯಾಯಾಧೀಶ ರಾಕೇಶ್ ತಪ್ಲಿಯಾಲ್ ಅವರನ್ನೊಳಗೊಂಡ ನ್ಯಾಯಪೀಠವು ಜುಲೈ ಒಂದರಂದು ಈ ಆದೇಶ ನೀಡಿದೆ.

ಬಾಲಕಿಯರ ಹೆತ್ತವರು ನೀಡಿರುವ ದೂರಿನ ಆಧಾರದಲ್ಲಿ ಬಾಲಕರನ್ನು ಬಂಧಿಸಬಾರದು, ಯಾಕೆಂದರೆ ಅಲ್ಲಿ ಪೋಕ್ಸೊ ಅಡಿಯಲ್ಲಿ ಯಾವುದೇ ಅಪರಾಧ ನಡೆದಿರುವುದಿಲ್ಲ ಎಂದು ಎಂದು ಅರ್ಜಿದಾರರು ವಾದಿಸಿದ್ದಾರೆ.

ಬಾಲಕಿಯೊಂದಿಗೆ ಪ್ರೇಮ ಸಂಬಂಧ ಹೊಂದಿರುವ ಬಾಲಕನನ್ನು ಬಂಧಿಸುವ ಬದಲು, ಸಿಆರ್ಪಿಸಿಯ 161ನೇ ವಿಧಿಯಡಿ ಬಾಲಕನ ಹೇಳಿಕೆ ದಾಖಲಿಸಿದರೆ ಸಾಕೇ ಎನ್ನುವುದನ್ನು ಸರಕಾರ ಪರಿಶೀಲಿಸಬೇಕು ಎಂದು ಹೈಕೋರ್ಟ್ ಹೇಳಿತು.

‘‘ಹೆಚ್ಚೆಂದರೆ, ಇನ್ನು ಮುಂದೆ ಇಂಥ ಕೃತ್ಯಗಳಲ್ಲಿ ತೊಡಗಬೇಡ ಎಂದು ಬುದ್ಧಿವಾದ ಹೇಳಲು ಸಂಬಂಧಪಟ್ಟ ಬಾಲಕನನ್ನು ಕರೆಸಬಹುದು. ಆದರೆ ಬಂಧಿಸಬಾರದು. ಸರಕಾರವು ಈ ವಿಷಯವನ್ನು ಪರಿಶೀಲಿಸಿ, ಪೊಲೀಸ್ ಇಲಾಖೆಗೆ ಸಾಮಾನ್ಯ ನಿರ್ದೇಶನಗಳನ್ನು ನೀಡಬಹುದಾಗಿದೆ’’ ಎಂದು ನ್ಯಾಯಾಲಯ ಹೇಳಿತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News