ದಿಲ್ಲಿ ವಿಧಾನಸಭೆ ಅಧಿವೇಶನ | ಅಬಕಾರಿ ನೀತಿ ಕುರಿತ ಸಿಎಜಿ ವರದಿ ಮಂಡಿಸಿದ ಸಿಎಂ ರೇಖಾ ಗುಪ್ತಾ
Update: 2025-02-25 12:45 IST
Photo | X
ಹೊಸದಿಲ್ಲಿ : ದಿಲ್ಲಿ ಸಿಎಂ ರೇಖಾ ಗುಪ್ತಾ ಅವರು ದಿಲ್ಲಿ ಅಬಕಾರಿ ನೀತಿ ಕುರಿತ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯನ್ನು ಸದನದಲ್ಲಿ ಮಂಡಿಸಿದ್ದಾರೆ.
ದಿಲ್ಲಿ ಹಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಆಪ್ ಮುಖ್ಯಸ್ಥ ಕೇಜ್ರಿವಾಲ್ ಸೇರಿದಂತೆ ಕೆಲ ಆಪ್ ಉನ್ನತ ನಾಯಕರ ಬಂಧನವು ಈ ಮೊದಲು ನಡೆದಿತ್ತು. ವಿರೋಧ ಪಕ್ಷದ ಶಾಸಕರ ಗದ್ದಲದ ನಡುವೆ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮಂಗಳವಾರ ದಿಲ್ಲಿ ವಿಧಾನಸಭೆಯಲ್ಲಿ ಅಬಕಾರಿ ನೀತಿ ಕುರಿತ ಸಿಎಜಿ ವರದಿಯನ್ನು ಮಂಡಿಸಿದ್ದಾರೆ.
ಇದಕ್ಕೂ ಮೊದಲು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಸದನವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದ ಆಪ್ ಪಕ್ಷದ 12 ಶಾಸಕರನ್ನು ಒಂದು ದಿನದ ಮಟ್ಟಿಗೆ ಸ್ಪೀಕರ್ ವಿಜೇಂದರ್ ಗುಪ್ತಾ ಅಮಾನತುಗೊಳಿಸಿದ್ದಾರೆ.