ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅಧಿಕಾರಾವಧಿ ಒಂದು ವರ್ಷ ವಿಸ್ತರಣೆ
Update: 2025-05-07 22:31 IST
ಪ್ರವೀಣ್ ಸೂದ್ (PC: PTI)
ಹೊಸದಿಲ್ಲಿ: ಕೇಂದ್ರ ಸರಕಾರ ಬುಧವಾರ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಿಜೆಐ ಸಂಜೀವ್ ಖನ್ನಾ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಒಳಗೊಂಡ ಸಮಿತಿಯು ಸೋಮವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರವೀಣ್ ಅವರ ಅಧಿಕಾರಾವಧಿಯನ್ನು ಮೇ 24ರಿಂದ ಒಂದು ವರ್ಷ ವಿಸ್ತರಿಸುವಂತೆ ಸಮಿತಿ ನೀಡಿರುವ ಶಿಫಾರಸನ್ನು ಸಂಪುಟದ ನೇಮಕಾತಿ ಸಮಿತಿ(ಎಸಿಸಿ) ಅಂಗೀಕರಿಸಿದೆ.
ಪ್ರವೀಣ್ ಸೂದ್ ಅವರು 2023ರ ಮೇ 25ರಂದು ಸಿಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು.