×
Ad

ಚಂಪೈ ಸೊರೆನ್ ಜಾರ್ಖಂಡ್ ನ ನೂತನ ಸಿಎಂ ಆಗಲಿದ್ದಾರೆ: ಜೆಎಂಎಂ

Update: 2024-01-31 20:57 IST

PHOTO : X/@ChampaiSoren

ರಾಂಚಿ : ಭೂ ಹಗರಣ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಹೇಮಂತ್‌ ಸೊರೆನ್‌ ಅವರನ್ನು ಈಡಿ ಬಂಧಿಸುತ್ತಿದ್ದಂತೆ, ಚಂಪೈ ಸೊರೆನ್ ಜಾರ್ಖಂಡ್ ನ ನೂತನ ಸಿಎಂ ಆಗಲಿದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪ್ರಕಟಿಸಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

 "ಈಡಿ ಅಧಿಕಾರಿಗಳು ಹೇಮಂತ್ ಸೊರೆನ್ ಜೊತೆಗೆ ರಾಜಭವನಕ್ಕೆ ಹೋಗಿದ್ದರು" ಎಂದು ಜೆಎಂಎಂ ರಾಜ್ಯಸಭಾ ಸಂಸದ ಮಹುವಾ ಮಾಝಿ ಹೇಳಿದ್ದಾರೆ.

ಹೇಮಂತ್ ಸೊರೆನ್ ಅವರ ಪತ್ನಿಯನ್ನು ಮುಂದಿನ ಮುಖ್ಯಮಂತ್ರಿ ಎಂದು ಹೆಸರಿಸಲಾಗುವುದು ಎಂದು ಸುದ್ದಿಗಳು ಹರಿದಾಡಿತ್ತು. ಚಂಪೈ ಸೊರೆನ್ ಅವರು ಹೇಮಂತ್ ಅವರ ಸಂಪುಟದಲ್ಲಿ ಸಾರಿಗೆ, ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News