ಬಿಜೆಪಿ ಅಧ್ಯಕ್ಷರನ್ನು ‘ಮುಂಬೈ ಕಾಂಗ್ರೆಸ್ ಅಧ್ಯಕ್ಷರೇ’ ಎಂದ ಚವಾಣ್!
Update: 2024-02-13 23:23 IST
Photo : x/@Devendra_Office
ಮುಂಬೈ : ಕಾಂಗ್ರೆಸ್ ತೊರೆದ ಒಂದು ದಿನದ ಬಳಿಕ ಬಿಜೆಪಿ ಸೇರಿದ ಮಾಜಿ ಸಿಎಂ ಅಶೋಕ್ ಚವಾಣ್, ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತು ಆರಂಭಿಸುವ ವೇಳೆ ಮುಂಬೈ ನಗರ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ಅವರನ್ನು “ಮುಂಬೈ ಕಾಂಗ್ರೆಸ್ ಅಧ್ಯಕ್ಷ” ಎಂದು ತಪ್ಪಾಗಿ ಉಲ್ಲೇಖಿಸಿ, ಪೇಚಿಗೆ ಸಿಲುಕಿದ ಘಟನೆ ಮಂಗಳವಾರ ವರದಿಯಾಗಿದೆ.
ಅಶೋಕ್ ಚವಾಣ್ ಅವರು ತಪ್ಪಾಗಿ ಉಲ್ಲೇಖಿಸುತ್ತಿದ್ದಂತೆ ಪಕ್ಕದಲ್ಲೇ ಕುಳಿತಿದ್ದ ಡಿಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಕಾರ್ಯಕ್ರಮದಲ್ಲಿದ್ದವರು ನಗೆಗಡಲಲ್ಲಿ ತೇಲಿದರು. ತಪ್ಪು ಸರಿಪಡಿಸಿಕೊಂಡು ಮಾತನಾಡಿದ ಚವಾಣ್, ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದೆ. ಮಾತನಾಡಿ ಮಾತನಾಡಿ ಬಾಯ್ತಪ್ಪಿನಿಂದ ಅದೇ ಮಾತು ಹೊರಳುತ್ತದೆ ಎಂದು ತಾವೂ ನಕ್ಕರು. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.