×
Ad

ಚೆನ್ನೈ : ಮಹಿಳೆಗೆ ಕಿರುಕುಳ ಆರೋಪ; ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು

Update: 2023-11-25 09:26 IST

Photo: freepik

ಚೆನ್ನೈ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತಮಿಳು ನ್ಯೂಸ್ ಟಿವಿ ಚಾನಲ್ ನ ಪತ್ರಕರ್ತ ಸೇರಿದಂತೆ ಹಲವು ಮಂದಿಯ ವಿರುದ್ಧ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಹಿಳೆಯು ಬಾರ್ ನಿಂದ ತೆರಳುತ್ತಿದ್ದ ದೃಶ್ಯವನ್ನು ಕಾನೂನುಬಾಹಿರವಾಗಿ ಚಿತ್ರೀಕರಿಸಿರುವುದು ಮಾತ್ರವಲ್ಲದೇ, ಅಶ್ಲೀಲ ಪದಗಳನ್ನು ಬಳಸಿ ಆರೋಪಿಗಳು ಆಕೆಯನ್ನು ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ. ಈ ದೃಶ್ಯಾವಳಿಯನ್ನು ಹಲವು ಚಾನಲ್ ಗಳು ಪ್ರಸಾರ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಲೈಂಗಿಕ ಕಿರುಕುಳ, ಸ್ಪಷ್ಟ ಲೈಂಗಿಕ ನಡವಳಿಕೆ, ಮಹಿಳೆಯನ್ನು ಅಕ್ರಮವಾಗಿ ತಡೆದಿರುವುದು, ಕಾನೂನುಬಾಹಿರವಾಗಿ ಗುಂಪು ಸೇರಿದ್ದು, ಅಶ್ಲೀಲ ಹಾಡುಗಳನ್ನು ಹಾಡಿರುವುದು, ಮಹಿಳೆಯ ಘನತೆಗೆ ಚ್ಯುತಿ ಬರುವ ಉದ್ದೇಶದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News