×
Ad

ಇಬ್ಬರು ಪುಟ್ಟ ಬಾಲಕಿಯರ ಪ್ರಾಣ ತೆಗೆದ ಚಾಕೊಲೇಟ್ !

Update: 2023-08-18 08:58 IST

ಸಾಂದರ್ಭಿಕ ಚಿತ್ರ : iStock

ಕೌಶಂಬಿ: ಜಿಲ್ಲೆಯ ಗ್ರಾಮವೊಂದರಲ್ಲಿ ಚಾಕೊಲೇಟ್ ಸೇವಿಸಿದ ಇಬ್ಬರು ಪುಟ್ಟ ಬಾಲಕಿಯರು ನಿಗೂಢವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಕಾಡಾಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಸಾಧನಾ (7) ಮತ್ತು ಶಾಲಿನಿ (4) ಎಂಬ ಸಹೋದರಿಯರು ಗುರುವಾರ ಬೆಳಿಗ್ಗೆ ಚಾಕೊಲೇಟ್ ಸೇವಿಸಿ ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಇಬ್ಬರೂ ಬಾಲಕಿಯರು ಮೃತಪಟ್ಟರು ಎಂದು ವೃತ್ತ ನಿರೀಕ್ಷಕ ಅವದೇಶ್ ವಿಶ್ವಕರ್ಮ ಹೇಳಿದ್ದಾರೆ.

ಮೃತಪಟ್ಟ ಬಾಲಕಿಯರ ನೆರೆಮನೆಯ ವರ್ಷಾ (7) ಮತ್ತು ಆರುಷಿ (4) ಎಂಬ ಇಬ್ಬರು ಮಕ್ಕಳು ಕೂಡಾ ಚಾಕೊಲೇಟ್ ಸೇವಿಸಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಸಾಧನಾ ಮತ್ತು ಶಾಲಿನಿಯವರ ತಂದೆ ನೀಡಿದ ದೂರಿನ ಪ್ರಕಾರ ನೆರೆಮನೆಯವರೊಬ್ಬರು ಈ ಚಾಕೊಲೇಟ್ ನೀಡಿದ್ದರು. ಪ್ರಕರಣದ ಬಗ್ಗೆ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News