×
Ad

ಈಡಿಯಿಂದ ಸಂಜಯ್ ರಾವುತ್ ನಿಕಟವರ್ತಿ ಬಂಧನ

Update: 2023-07-21 22:27 IST

ಸಂಜಯ್ ರಾವುತ್ | Photo: PTI

ಮುಂಬೈ: ಜಂಬೋ ಕೋವಿಡ್ ಸೆಂಟರ್ ಹಗರಣಕ್ಕೆ ಸಂಬಂಧಿಸಿ ಅನುಷ್ಠಾನ ನಿರ್ದೇಶನಾಲಯ (ಈಡಿ)ವು ಗುರುವಾರ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ರ ನಿಕಟವರ್ತಿ ಉದ್ಯಮಿ ಸುಜಿತ್ ಪಾಟ್ಕರ್ ಮತ್ತು ವೈದ್ಯ ಕಿಶೋರ್ ಬಿಸುರೆಯನ್ನು ಬಂಧಿಸಿದೆ.

ಬಂಧಿತರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಧೀಶ ಎಮ್.ಜಿ. ದೇಶಪಾಂಡೆ ಎದರು ಹಾಜರುಪಡಿಸಲಾಯಿತು. ನ್ಯಾಯಾಧೀಶರು ಅವರನ್ನು ಜುಲೈ 27ರವರೆಗೆ ಈಡಿ ಕಸ್ಟಡಿಗೆ ಒಪ್ಪಿಸಿದರು.

ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ‘ಜಂಬೋ ಸೆಂಟರ್ಗಳು’ ಎಂಬ ಹೆಸರಿನ ಕೋವಿಡ್ ಬಯಲು ಆಸ್ಪತ್ರೆಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಶನ್ ನೀಡಿರುವ ಗುತ್ತಿಗೆಗಳಿಗೆ ಸಂಬಂಧಿಸಿದ ಹಣ ವರ್ಗಾವಣೆಗಳ ಬಗ್ಗೆ ತನಿಖೆ ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News