ಉಗ್ರರ ಗುಂಡಿನ ದಾಳಿಗೆ ಹುತಾತ್ಮರಾಗುವ ಮೊದಲು ಕುಟುಂಬ ಸದಸ್ಯರಿಗೆ ಕೊನೆಯ ಬಾರಿ ಫೋನ್ ಕರೆ ಮಾಡಿದ್ದ ಕರ್ನಲ್ ಮನ್ ಪ್ರೀತ್ ಸಿಂಗ್
"ನಾವು ಅವರೊಂದಿಗೆ (ಕರ್ನಲ್ ಸಿಂಗ್) ಬೆಳಗ್ಗೆ 6:45 ಕ್ಕೆ ಕೊನೆಯ ಬಾರಿ ಮಾತನಾಡಿದ್ದೇವೆ. ಅವರು ನಂತರ ಕರೆ ಮಾಡಿ ಮಾತನಾಡುವುದಾಗಿ ಹೇಳಿದ್ದರು. ಅವರು ಒಳ್ಳೆಯ ವ್ಯಕ್ತಿ. ಕಳೆದ ವರ್ಷ ಅವರ ಕರ್ತವ್ಯವನ್ನು ಗುರುತಿಸಿ ಅವರಿಗೆ ಸೇನಾ ಪದಕವನ್ನು ನೀಡಲಾಯಿತು. ನಾನು ಅವರಿಗೆ ಸೆಲ್ಯೂಟ್ ಮಾಡುತ್ತೇನೆ" ಎಂದು ಕರ್ನಲ್ ಸಿಂಗ್ ಅವರ ಸಹೋದರ ಮಾವ ವೀರೇಂದ್ರ ಗಿಲ್ ಹೇಳಿದರು.
Photo: Twitter@NDTV
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾಧಿಕಾರಿಗಳು ಹಾಗೂ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದರು. ಕರ್ನಲ್ ಮನ್ಪ್ರೀತ್ ಸಿಂಗ್ ಅವರು ಆ ದಿನ ಬೆಳಿಗ್ಗೆ 6:45 ಕ್ಕೆ ಕೊನೆಯ ಬಾರಿಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದರು.
ಅನಂತನಾಗ್ ಜಿಲ್ಲೆಯ ಗರೋಲ್ ಪ್ರದೇಶದಲ್ಲಿ ಬುಧವಾರ ಭಯೋತ್ಪಾದಕರೊಂದಿಗಿನ ಗುಂಡಿನ ಕಾಳಗದಲ್ಲಿ ಕರ್ನಲ್ ಸಿಂಗ್, ಮೇಜರ್ ಆಶಿಶ್ ಧೋನಾಕ್ ಹಾಗೂ ಜಮ್ಮು-ಕಾಶ್ಮೀರದ ಪೊಲೀಸ್ ಡಿಎಸ್ಪಿ ಹುಮಾಯೂನ್ ಭಟ್ ಗಂಭೀರ ಗಾಯಗೊಂಡಿದ್ದರು.
ಚಿಕಿತ್ಸೆ ವೇಳೆ ಗಂಭೀರ ಗಾಯಗೊಂಡಿದ್ದ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಓರ್ವ ಯೋಧ ಕೂಡ ಸಾವನ್ನಪ್ಪಿದ್ದು, ಮತ್ತೊಬ್ಬ ಯೋಧ ಎಲ್ಲಿದ್ದಾನೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿದ್ದಾರೆ.
"ನಾವು ಅವರೊಂದಿಗೆ (ಕರ್ನಲ್ ಸಿಂಗ್) ಬೆಳಗ್ಗೆ 6:45 ಕ್ಕೆ ಕೊನೆಯ ಬಾರಿ ಮಾತನಾಡಿದ್ದೇವೆ. ಅವರು ನಂತರ ಕರೆ ಮಾಡಿ ಮಾತನಾಡುವುದಾಗಿ ಹೇಳಿದ್ದರು. ಅವರು ಒಳ್ಳೆಯ ವ್ಯಕ್ತಿ. ಕಳೆದ ವರ್ಷ ಅವರ ಕರ್ತವ್ಯವನ್ನು ಗುರುತಿಸಿ ಅವರಿಗೆ ಸೇನಾ ಪದಕವನ್ನು ನೀಡಲಾಯಿತು. ನಾನು ಅವರಿಗೆ ಸೆಲ್ಯೂಟ್ ಮಾಡುತ್ತೇನೆ" ಎಂದು ಕರ್ನಲ್ ಸಿಂಗ್ ಅವರ ಸಹೋದರ ಮಾವ ವೀರೇಂದ್ರ ಗಿಲ್ ಹೇಳಿದರು.
41 ವರ್ಷದ ಸಿಂಗ್ ಅವರು 19 ರಾಷ್ಟ್ರೀಯ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಆಗಿದ್ದರು.
ಮೇಜರ್ ಆಶಿಶ್ ಧೋನಕ್(34 ವರ್ಷ) ಹರ್ಯಾಣದ ಪಾಣಿಪತ್ ನಲ್ಲಿ ವಾಸಿಸುವ ಅವರ ಪತ್ನಿ ಹಾಗೂ ಎರಡು ವರ್ಷದ ಪುತ್ರಿಯನ್ನು ಅಗಲಿದ್ದಾರೆ.
"ಕೊನೆಯದಾಗಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೆ. ಅವರು ಒಂದೂವರೆ ತಿಂಗಳ ಹಿಂದೆ ಮನೆಯಲ್ಲಿದ್ದರು ಹಾಗೂ ಮನೆಗಳನ್ನು ಬದಲಾಯಿಸಲು ಅಕ್ಟೋಬರ್ ನಲ್ಲಿ ಹಿಂತಿರುಗಬೇಕಿತ್ತು" ಎಂದು ಮೇಜರ್ ಧೋನಕ್ ಅವರ ಚಿಕ್ಕಪ್ಪ ಹೇಳಿದರು.
ಹುಮಾಯುನ್ ಭಟ್ ಜಮ್ಮು-ಕಾಶ್ಮೀರ ಪೊಲೀಸ್ ಡಿಎಸ್ಪಿಯಾಗಿದ್ದು ಜಮ್ಮು-ಕಾಶ್ಮೀರದ ಪೋಲಿಸ್ ನ ನಿವೃತ್ತ ಇನ್ಸ್ ಪೆಕ್ಟರ್ ಜನರಲ್ ಗುಲಾಮ್ ಹಸನ್ ಭಟ್ ಅವರ ಪುತ್ರರಾಗಿದ್ದರು. ಅವರು ಭಾರೀ ರಕ್ತಸ್ರಾವದಿಂದಾಗಿ ನಿಧನರಾದರು. ಭಟ್ ಅವರು ಪತ್ನಿ ಎರಡು ತಿಂಗಳ ಹೆಣ್ಣು ಮಗುವನ್ನು ಅಗಲಿದ್ದಾರೆ.
ಅನಂತನಾಗ್ ನ ಕೋಕರ್ ನಾಗ್ ಪ್ರದೇಶದ ಅರಣ್ಯ ಪ್ರದೇಶದಿಂದ ಪೊಲೀಸ್ ಅಧಿಕಾರಿ ಮತ್ತು ಇಬ್ಬರು ಸೇನಾಧಿಕಾರಿಗಳ ಮೃತದೇಹಗಳನ್ನು ಹೊರತೆಗೆಯಲಾಗಿತ್ತು.