ರಾಜ್ಯಸಭಾ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್: ಕರ್ನಾಟಕದಿಂದ ನಾಸಿರ್ ಹುಸೈನ್, ಜಿ.ಸಿ. ಚಂದ್ರಶೇಖರ್, ಅಜಯ್ ಮಾಕನ್ ಕಣಕ್ಕೆ
Update: 2024-02-14 16:28 IST
ನಾಸಿರ್ ಹುಸೈನ್, ಜಿ.ಸಿ. ಚಂದ್ರಶೇಖರ್, ಅಜಯ್ ಮಾಕೆನ್( X/GC ChandraShekhar/ PTI)
ಹೊಸದಿಲ್ಲಿ: ರಾಜ್ಯ ಸಭಾ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಕರ್ನಾಟಕದಿಂದ ಅಜಯ್ ಮಾಕನ್, ಡಾ. ಸೈಯದ್ ನಾಸಿರ್ ಹುಸೇನ್ ಮತ್ತು ಜಿಸಿ ಚಂದ್ರಶೇಖರ್ ರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಮಧ್ಯಪ್ರದೇಶದಿಂದ ಅಶೋಕ್ ಸಿಂಗ್ ಹಾಗೂ ತೆಲಂಗಾಣದಿಂದ ರೇಣುಕಾ ಚೌಧರಿ ಹಾಗೂ ಅನಿಲ್ ಕುಮಾರ್ ಯಾದವ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.