×
Ad

ಕಾಂಗ್ರೆಸ್ ನಾಯಕ ಪವನ್ ಖೇರಾ ಬಳಿ ಎರಡು ಮತದಾರರ ಗುರುತಿನ ಚೀಟಿಗಳಿವೆ: ಬಿಜೆಪಿ ಆರೋಪ

Update: 2025-09-02 18:27 IST

ಪವನ್‌ ಖೇರಾ| Photo: PTI  

ಹೊಸದಿಲ್ಲಿ : ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪವನ್ ಖೇರಾ ದಿಲ್ಲಿಯಲ್ಲಿ ಎರಡು ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದಾರೆ ಆರೋಪಿಸಿದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಕಾಂಗ್ರೆಸ್ ಪಕ್ಷ ಮತ ಕಳ್ಳತನ ಮಾಡುವ ಪಕ್ಷ ಎಂದು ಟೀಕಿಸಿದ್ದಾರೆ. 

ಬಿಜೆಪಿಯ ಮತ ಕಳ್ಳತನವನ್ನು ದೊಡ್ಡ ಮಟ್ಟದಲ್ಲಿ ಬಯಲು ಮಾಡುತ್ತೇನೆ ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಮಿತ್ ಮಾಳವೀಯ ಈ ಆರೋಪವನ್ನು ಮಾಡಿದ್ದಾರೆ.

ಮತದಾರರ ಗುರುತಿನ ಚೀಟಿಯ ಪೋಟೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಅಮಿತ್ ಮಾಳವೀಯ, ಪವನ್ ಖೇರಾ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಅಂದರೆ ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದ ಅಧೀನದ ಜಂಗ್ಪುರ ಮತ್ತು ಹೊಸದಿಲ್ಲಿಯಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಸದಾ ಮತ ಕಳ್ಳತನದ ಬಗ್ಗೆ ಕೂಗಾಡುತ್ತಾರೆ. ಆದರೆ ಅವರ ಆಪ್ತ ಪವನ್ ಖೇರಾ ಅವರ ಹೆಸರಿನಲ್ಲಿ ದಿಲ್ಲಿಯಲ್ಲಿ ಎರಡು ಮತದಾರರ ಗುರುತಿನ ಚೀಟಿಗಳಿವೆ. ಎರಡು ಪ್ರತ್ಯೇಕ ಗುರುತಿನ ಚೀಟಿಗಳನ್ನು ಹೊಂದುವುದು ಕಾನೂನುಬದ್ಧ ಅಪರಾಧವಾಗಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಪವನ್ ಖೇರಾ ಎರಡು ಗುರುತಿನ ಚೀಟಿಗಳನ್ನು ಹೇಗೆ ಪಡೆದಿದ್ದಾರೆ? ಅವರು ಹಲವು ಬಾರಿ ಮತ ಚಲಾಯಿಸಿದ್ದಾರಾ? ಎಂಬ ಬಗ್ಗೆ ತನಿಖೆ ಮಾಡುವುದು ಚುನಾವಣಾ ಆಯೋಗದ ಕೆಲಸ” ಎಂದು ಅಮಿತ್ ಮಾಳವೀಯ ಪೋಸ್ಟ್‌ನಲ್ಲಿ ಹೇಳಿದ್ದಾರೆ.   

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News