×
Ad

ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸತತ ಏರಿಕೆ| ಇಂದಿನ ದರವೆಷ್ಟಿದೆ?

Update: 2026-01-07 11:49 IST

ಸಾಂದರ್ಭಿಕ ಚಿತ್ರ (AI)


ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗುತ್ತಿರುವುದೂ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.

ಹೊಸದಿಲ್ಲಿ: ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ರೂಪಾಯಿ ದೌರ್ಬಲ್ಯದಿಂದ ಬೆಳ್ಳಿ ಮತ್ತು ಚಿನ್ನದ ಬೆಲೆ ಸತತ ಏರಿಕೆ ಕಂಡಿವೆ. ಹೂಡಿಕೆದಾರರು ಸುರಕ್ಷಿತ ಆಸ್ತಿಗಳತ್ತ ಮುಖ ಮಾಡುತ್ತಿರುವ ಕಾರಣದಿಂದ ಚಿನ್ನದ ಬೆಲೆ ಇಂದೂ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ವಿಶೇಷವಾಗಿ ಅಮೆರಿಕ-ವೆನೆಜುವೆಲಾ ನಡುವಿನ ರಾಜಕೀಯ ಬೆಳವಣಿಗೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟುಮಾಡಿ ನೇರವಾಗಿ ಚಿನ್ನದ ದರದ ಮೇಲೆ ಪರಿಣಾಮವಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗುತ್ತಿರುವುದೂ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಸೋಮವಾರದಿಂದ ಸತತ ಏರಿಕೆಯಲ್ಲಿರುವ ಚಿನ್ನ ಬುಧವಾರವೂ ಸ್ವಲ್ಪ ಹೆಚ್ಚಳವಾಗಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ಸತತ ಏರಿಕೆಯ ಕಾರಣದಿಂದ ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದ್ದಂತೆ ಚಿನ್ನದ ದರದಲ್ಲಿ ಗ್ರಾಂ ಒಂದಕ್ಕೆ ಕನಿಷ್ಠ 500ರಿಂದ 1000ರೂ.ಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?

ಬುಧವಾರ ಜನವರಿ 7 ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 13,948 (+66) ರೂ.ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 12,785 (+60) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,461 (+49) ರೂ. ಬೆಲೆಗೆ ತಲುಪಿದೆ.

ಕರ್ನಾಟಕದಲ್ಲಿ ಚಿನ್ನದ ದರವೆಷ್ಟು?

ಕರ್ನಾಟಕದಲ್ಲಿ ಬುಧವಾರ ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 13,883 ರೂ.ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 12,726 ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,413 ರೂ. ಬೆಲೆಗೆ ತಲುಪಿದೆ. ಈ ನಡುವೆ ಬೆಂಗಳೂರಿನಲ್ಲಿ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 1,38,830 ರೂ., 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 1,27,260 ರೂ. ಮತ್ತು ಬೆಳ್ಳಿ ಬೆಲೆ 1 ಕೆಜಿಗೆ 2,57,900 ರೂ.ಗೆ ತಲುಪಿದೆ.

ವಿವಿಧ ನಗರಗಳಲ್ಲಿ ಒಂದು ಗ್ರಾಂ 22 ಕ್ಯಾರಟ್ ಚಿನ್ನದ (ಆಭರಣ) ಬೆಲೆ

ಚೆನ್ನೈ 12,831 ರೂ.

ಮುಂಬೈ 12,726 ರೂ.

ದೆಹಲಿ 12,741 ರೂ.

ಕೋಲ್ಕತ್ತಾ 12,726 ರೂ.

ಹೈದರಾಬಾದ್ 12,726 ರೂ.

ಕೇರಳ 12,726 ರೂ.

ಪುಣೆ 12,726 ರೂ.

ವಡೋದರಾ 12,731 ರೂ.

ಅಹಮದಾಬಾದ್ 12,731 ರೂ.

ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ:

ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ 263ರೂ. ಆಗಿದೆ. ಮಂಗಳವಾರ ಬೆಲೆ 253 ರೂ.ಆಗಿದ್ದು ಬುಧವಾರಕ್ಕಾಗುವಾಗ ಬರೋಬ್ಬರಿ 10 ರೂ. ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿ ಇಂದು 2,104 ರೂ. ಇದೆ. ಮಂಗಳವಾರ 2,024 ರೂ. ಆಗಿದ್ದು,100 ರೂ. ಏರಿಕೆ ಕಂಡಿದೆ. ಒಟ್ಟಾಗಿ ಬೆಳ್ಳಿ ಬೆಲೆ 1 ಕೆಜಿಗೆ 2,57,900 ರೂ.ಗೆ ತಲುಪಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News