×
Ad

ಪಂಜಾಬ್ | ಅಮೆರಿಕದಿಂದ ಗಡಿಪಾರಾದ ಅಕ್ರಮ ವಲಸಿಗರಲ್ಲಿ ಇಬ್ಬರು ಕೊಲೆ ಪ್ರಕರಣದಲ್ಲಿ ಬಂಧನ

Update: 2025-02-16 16:45 IST

Photo credit: PTI

ಅಮೃತಸರ : ಅಮೆರಿಕ ಗಡಿಪಾರು ಮಾಡಿರುವ 119 ಭಾರತೀಯರಿದ್ದ ಅಮೆರಿಕದ ಮಿಲಿಟರಿ ಯುದ್ಧ ವಿಮಾನ ಶನಿವಾರ ರಾತ್ರಿ ಅಮೃತಸರಕ್ಕೆ ಬಂದಿಳಿದಿದೆ. ಈ ವೇಳೆ ವಿಮಾನದಲ್ಲಿದ್ದ ಇಬ್ಬರನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

ಸಂದೀಪ್ ಮತ್ತು ಪ್ರದೀಪ್ ಬಂಧಿತ ಆರೋಪಿಗಳು. ಇವರು ಸೋದರ ಸಂಬಂಧಿಗಳಾಗಿದ್ದು, 2023ರಲ್ಲಿ ಪಟಿಯಾಲ ಜಿಲ್ಲೆಯ ರಾಜಪುರ ಪಟ್ಟಣದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಶನಿವಾರ ಅಮೃತಸರದ ಶ್ರೀ ಗುರು ರಾಮದಾಸ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಕ್ಷಣ ಪಟಿಯಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ʼಸಂದೀಪ್ ಮತ್ತು ಪ್ರದೀಪ್ ರಾಜಪುರ ಪಟ್ಟಣದ ನಿವಾಸಿಗಳಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧ ಪಟಿಯಾಲಾ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 307, 323, 506, 148 ಮತ್ತು 149ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರುʼ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News