×
Ad

ಗಾಝಾ ಪರ ಒಗ್ಗಟ್ಟು ಪ್ರದರ್ಶಿಸಿ 'ಡಿಜಿಟಲ್ ಸತ್ಯಾಗ್ರಹ'ಕ್ಕೆ ಕರೆ ನೀಡಿದ ಸಿಪಿಐ(ಎಂ) ನಾಯಕ ಎಂಎ ಬೇಬಿ

Update: 2025-07-06 14:01 IST

ಎಂ.ಎ.ಬೇಬಿ (Photo credit: indiatoday.in) 

ಹೊಸದಿಲ್ಲಿ: ಗಾಝಾದಲ್ಲಿ ನಡೆಯುತ್ತಿರುವ ಯುದ್ಧದ ವಿರುದ್ಧ ಸಾಂಕೇತಿಕ ಪ್ರತಿಭಟನೆಯಾಗಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಒಂದು ವಾರ 'ಡಿಜಿಟಲ್ ಸತ್ಯಾಗ್ರಹ'ಕ್ಕೆ ಕರೆ ನೀಡಿದ್ದಾರೆ.

ಶನಿವಾರದಿಂದ ಜನರು ಪ್ರತಿ ರಾತ್ರಿ 9 ರಿಂದ 9:30ರವರೆಗೆ ಮೊಬೈಲ್ ಫೋನ್‌ಗಳು, ಕಂಪ್ಯೂಟರ್‌ಗಳು ಸೇರಿದಂತೆ ಎಲ್ಲಾ ಡಿಜಿಟಲ್ ಸಾಧನಗಳನ್ನು ಆಫ್ ಮಾಡಬೇಕು ಎಂದು ಎಂ.ಎ. ಬೇಬಿ ಒತ್ತಾಯಿಸಿದ್ದಾರೆ.

"ಈ ವಿಧಾನ ಸಾಂಪ್ರದಾಯಿಕ ಗಾಂಧಿವಾದಿ ಪ್ರತಿಭಟನೆಯ ಆಧುನಿಕ ರೂಪಾಂತರ. ಯುದ್ಧ ಮತ್ತು ಹಸಿವಿನಿಂದ ಬಳಲುತ್ತಿರುವ ಫೆಲೆಸ್ತೀನ್ ಜನರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವ ಸಲುವಾಗಿ ಪ್ರತಿದಿನ 30 ನಿಮಿಷ ಡಿಜಿಟಲ್ ಸತ್ಯಾಗ್ರಹ ನಡೆಸಬೇಕು. ಈ ಸತ್ಯಾಗ್ರಹ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧದ ವಿರುದ್ಧ ಖಂಡನೆಯನ್ನು ವ್ಯಕ್ತಪಡಿಸುವ ಗುರಿಯನ್ನು ಹೊಂದಿದೆ" ಎಂದು ಎಂ.ಎ. ಬೇಬಿ ಹೇಳಿದರು.

ಗೂಗಲ್, ಅಮೆಝಾನ್, ಮೈಕ್ರೋಸಾಫ್ಟ್ ಮತ್ತು ಐಬಿಎಂ ಸೇರಿದಂತೆ 48 ಪ್ರಮುಖ ತಂತ್ರಜ್ಞಾನ ಕಂಪೆನಿಗಳು ಗಾಝಾ ಸಂಘರ್ಷದಿಂದ ಲಾಭ ಗಳಿಸುತ್ತಿದೆ ಎಂಬ ವಿಶ್ವಸಂಸ್ಥೆಯ ವಿಶೇಷ ವರದಿಗಾರ ಫ್ರಾನ್ಸೆಸ್ಕಾ ಅಲ್ಬನೀಸ್ ಅವರ ವರದಿಯ ಬೆನ್ನಲ್ಲೇ ಎಂಎ ಬೇಬಿ ಡಿಜಿಟಲ್‌ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News