×
Ad

ನದಿ ಬಳಿ ಸ್ನಾನ ಮಾಡುತ್ತಿದ್ದ ಮಹಿಳೆಯನ್ನು ಎಳೆದೊಯ್ದ ಮೊಸಳೆ

Update: 2023-08-17 17:18 IST

Photo credit: indiatoday.in

ಜಾಜ್ಪುರ್ (ಒಡಿಶಾ): ಮೊಸಳೆಯೊಂದು 35 ವರ್ಷದ ಮಹಿಳೆಯೊಬ್ಬಳನ್ನು ಕೊಂದು ಹಾಕಿರುವ ಘಟನೆ ಒಡಿಶಾ ರಾಜ್ಯದ ಜಾಜ್ಪುರ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ ಎಂದು indiatoday.in ವರದಿ ಮಾಡಿದೆ.

ಸಂತ್ರಸ್ತೆಯನ್ನು ಜ್ಯೋತ್ಸ್ನಾ ರಾಣಿ ಎಂದು ಗುರುತಿಸಲಾಗಿದ್ದು, ಆಕೆ ಬಿರುಪ ನದಿಯ ಬಳಿ ಸ್ನಾನ ಮಾಡುವಾಗ ಮೊಸಳೆಯು ಆಕೆಯನ್ನು ನದಿಯ ಆಳಕ್ಕೆ ಸೆಳೆದುಕೊಂಡು ಹೋಗಿದೆ. ಈ ಘಟನೆಯು ಜಾಜ್ಪುರ್ ಜಿಲ್ಲೆಯ ಪಲತ್ಪುರ್ ಗ್ರಾಮದಲ್ಲಿ ಜರುಗಿದೆ.

ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳು ವೈರಲ್ ಆಗಿದ್ದು, ಮೊಸಳೆಯು ಮಹಿಳೆಯನ್ನು ನದಿಗೆ ಸೆಳೆದುಕೊಂಡು ಹೋಗಿ ಆಕೆಯ ದೇಹವನ್ನು ತಿಂದು ಹಾಕಿರುವುದಕ್ಕೆ ಪ್ರತ್ಯಕ್ಷದರ್ಶಿಗಳು ಸಾಕ್ಷಿಯಾಗಿದ್ದಾರೆ. ಈ ಭಯಾನಕ ಘಟನೆಯ ವಿಡಿಯೊವನ್ನು ಸೆರೆ ಹಿಡಿಯಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ಕೈಗೊಂಡು, ಮಹಿಳೆಯ ಮೃತದೇಹವನ್ನು ನದಿಯಿಂದ ಹೊರ ತೆಗೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News