×
Ad

ಮಹಾಕುಂಭ ಮೇಳದಲ್ಲಿ ಜನದಟ್ಟಣೆ; ಸಂಗಮಕ್ಷೇತ್ರದಲ್ಲಿ ಮಿಂದೆದ್ದ 10 ಕೋಟಿ ಮಂದಿ

Update: 2025-01-24 14:20 IST

ಪ್ರಯಾಗ್‌ರಾಜ್: ಜನವರಿ 13ರಂದು ಆರಂಭವಾಗಿರುವ ಮಹಾಕುಂಭ ಮೇಳದ ಮೊದಲ 10 ದಿನಗಳಲ್ಲಿ 10 ಕೋಟಿ ಮಂದಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಕ್ಷೇತ್ರದಲ್ಲಿ ಪುಣ್ಯಸ್ನಾನ ಕೈಗೊಂಡಿದ್ದಾರೆ. ಇದು ವಿಶ್ವಾದ್ಯಂತ ಇರುವ ಸಾಧುಗಳು, ಕಲ್ಪವಾಸಿಗಳು ಮತ್ತು ತೀರ್ಥಯಾತ್ರಾಸಕ್ತರಿಗೆ ಇರುವ ಅಪೂರ್ವ ನಂಬಿಕೆ ಮತ್ತು ಭಕ್ತಿಯನ್ನು ಸೂಚಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

45 ದಿನಗಳ ಅವಧಿಯ ಈ ಮಹಾಮೇಳದಲ್ಲಿ 45 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹೊಂದಿದ್ದು, 10 ಕೋಟಿ ಮಂದಿಯ ಗಡಿ ದಾಟುವ ಮೂಲಕ ನಿರೀಕ್ಷೆ ನಿಜವಾಗುವ ಸಾಧ್ಯತೆ ಅಧಿಕವಾಗಿದೆ. ಗುರುವಾರ 30 ಲಕ್ಷ ಭಕ್ತರು 10 ಲಕ್ಷ ಕಲ್ಪವಾಸಿಗಳು ಸ್ನಾನ ಕೈಗೊಂಡಿದ್ದು, ದೈನಂದಿನ ಯಾತ್ರಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಮೂಲಗಳು ಹೇಳಿವೆ.

ಭಾರತ ಮಾತ್ರವಲ್ಲದೇ ಅಮೆರಿಕ, ಕೆನಡಾ, ಜರ್ಮನಿ, ರಷ್ಯಾ, ಫ್ಯುಜಿ, ಮರೀಷಿಯಸ್, ಮಲೇಷ್ಯಾ, ಆಸ್ಟ್ರೇಲಿಯಾ ಮತ್ತಿತರ ದೇಶಗಳಿಂದಲೂ ದೊಡ್ಡ ಸಂಖ್ಯೆಯ ಯಾತ್ರಾರ್ಥಿಗಳು ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News