×
Ad

ಕೇಜ್ರಿವಾಲ್‌ ಅವರನ್ನು ಅಧಿಕೃತವಾಗಿ ಬಂಧಿಸಲು ಸಿಬಿಐಗೆ ಅನುಮತಿಸಿದ ದಿಲ್ಲಿ ಕೋರ್ಟ್‌

Update: 2024-06-26 12:35 IST

 ಅರವಿಂದ್‌ ಕೇಜ್ರಿವಾಲ್‌ | PC : ANI 

ಹೊಸದಿಲ್ಲಿ: ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಅಧಿಕೃತವಾಗಿ ಬಂಧಿಸಲು ದಿಲ್ಲಿಯ ನ್ಯಾಯಾಲಯವೊಂದು ಇಂದು ಸಿಬಿಐಗೆ ಅನುಮತಿ ನೀಡಿದೆ.

ನ್ಯಾಯಾಧೀಶ ಅಮಿತಾಭ್‌ ರಾವತ್‌ ಆದೇಶ ಹೊರಡಿಸಿದ ನಂತರ ಸಿಬಿಐ ಕೇಜ್ರಿವಾಲ್‌ ಅವರನ್ನು ಬಂಧಿಸಿದೆ.

ತಿಹಾರ್‌ ಕೇಂದ್ರ ಕಾರಾಗೃಗದಿಂದ ಆಪ್‌ ನಾಯಕನನ್ನು ನ್ಯಾಯಾಲಯದೆದುರು ಹಾಜರುಪಡಿಸಿದಾಗ ಸಿಬಿಐ ಅವರನ್ನು ಬಂಧಿಸಲು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲಾಯಿತು.

ಅಬಕಾರಿ ಹಗರಣ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ ಪ್ರಸ್ತುತ ಬಂಧನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News