×
Ad

ಆರೆಸ್ಸೆಸ್‌ ಸಿದ್ದಾಂತಿ ಎಸ್‌. ಗುರುಮೂರ್ತಿಯ ಕ್ಷಮಾಪಣೆಯನ್ನು ಅಂಗೀಕರಿಸಿದ ದಿಲ್ಲಿ ಹೈಕೋರ್ಟ್‌

ಎಸ್ ಗುರುಮೂರ್ತಿಯವರ ಕ್ಷಮೆಯಾಚನೆ ಮತ್ತು ಈ ಘಟನೆಗೆ ಸಂಬಂಧಿಸಿದಂತೆ ತೀವ್ರ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿರುವುದನ್ನು ನಾವು ಸ್ವೀಕರಿಸುತ್ತೇವೆ ಮತ್ತು ಈ ನಿಂದನೆ ಅರ್ಜಿಯಲ್ಲಿ ಅವರಿಗೆ ನೀಡಲಾದ ಶೋಕಾಸ್ ಅನ್ನು ರದ್ದುಪಡಿಸುವುದು ಸೂಕ್ತವೆಂದು ಪರಿಗಣಿಸುತ್ತೇವೆ. ಅದರಂತೆ ಅವರನ್ನು ಖುಲಾಸೆಗೊಳಿಸಲಾಗಿದೆ,'' ಎಂದು ನ್ಯಾಯಾಲಯ ಹೇಳಿದೆ.

Update: 2023-07-13 14:06 IST

Photo : PTI 

ಹೊಸದಿಲ್ಲಿ: ಆರೆಸ್ಸೆಸ್‌ ಸಿದ್ದಾಂತಿ ಎಸ್. ಗುರುಮೂರ್ತಿಯವರು ತಾವು ಹಿಂದೆ ಮಾಡಿದ್ದ ಅವಹೇಳನಕಾರಿ ಟ್ವೀಟ್‌ ಗೆ ಸಂಬಂಧಿಸಿದಂತೆ ಕ್ಷಮೆ ಯಾಚನೆ ನಡೆಸಿದ್ದು ಹಾಗೂ ಪಶ್ಚಾತ್ತಾಪ ಧೋರಣೆ ತೋರಿರುವ ಕಾರಣ 2018ರಲ್ಲಿ ನ್ಯಾಯಮೂರ್ತಿ ಎಸ್ ಮುರಳೀಧರ್ ವಿರುದ್ಧ ಅವರು ಮಾಡಿದ ಟ್ವೀಟ್‌ಗೆ ಸಂಬಂಧಿಸಿದಂತೆ ದಾಖಲಿಸಲಾದ ಕ್ರಿಮಿನಲ್ ಅವಹೇಳನ ಪ್ರಕರಣದಲ್ಲಿ ಅವರನ್ನು ಬಿಡುಗಡೆ ಖುಲಾಸೆಗೊಳಿಸಲಾಗಿದೆ ಎಂದು livelaw ವರದಿ ಮಾಡಿದೆ.

ಎಸ್ ಗುರುಮೂರ್ತಿಯವರ ಕ್ಷಮೆಯಾಚನೆ ಮತ್ತು ಈ ಘಟನೆಗೆ ಸಂಬಂಧಿಸಿದಂತೆ ತೀವ್ರ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿರುವುದನ್ನು ನಾವು ಸ್ವೀಕರಿಸುತ್ತೇವೆ ಮತ್ತು ಈ ನಿಂದನೆ ಅರ್ಜಿಯಲ್ಲಿ ಅವರಿಗೆ ನೀಡಲಾದ ಶೋಕಾಸ್ ಅನ್ನು ರದ್ದುಪಡಿಸುವುದು ಸೂಕ್ತವೆಂದು ಪರಿಗಣಿಸುತ್ತೇವೆ. ಅದರಂತೆ ಅವರನ್ನು ಖುಲಾಸೆಗೊಳಿಸಲಾಗಿದೆ,'' ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ನೇತೃತ್ವದ ವಿಭಾಗೀಯ ಪೀಠವು 2018 ರಲ್ಲಿ ಎಸ್ ಗುರುಮೂರ್ತಿ ವಿರುದ್ಧ ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಸಲ್ಲಿಸಿದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಗುರುಮೂರ್ತಿ ಅವರು ಈ ಹಿಂದೆ ತಮ್ಮ ಸ್ವಂತ ಇಚ್ಛೆಯ ಮೇರೆಗೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿದ್ದರು ಮತ್ತು ಈ ಕುರಿತು ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು ಎಂದು ಪೀಠವು ಗಮನಿಸಿದೆ.

ಗುರುಮೂರ್ತಿ ಅವರು ಆಕ್ಷೇಪಾರ್ಹ ಎಂದು ಹೇಳಲಾದ ಎಲ್ಲಾ ಟ್ವೀಟ್‌ಗಳನ್ನು ತೆಗೆದುಹಾಕಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.

ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ನ್ಯಾಯಮೂರ್ತಿ ಮುರಳೀಧರ್ ನೇತೃತ್ವದ ವಿಭಾಗೀಯ ಪೀಠವು ಕಾರ್ತಿ ಚಿದಂಬರಂ ಅವರಿಗೆ ಮಧ್ಯಂತರ ರಕ್ಷಣೆ ನೀಡಿದ ನಂತರ ಈ ಟ್ವೀಟ್ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News