×
Ad

ದಿಲ್ಲಿ: ತಾಜ್ ಪ್ಯಾಲೇಸ್, 2 ಮ್ಯಾಕ್ಸ್ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ

Update: 2025-09-13 19:24 IST

Photo : deccanherald

ಹೊಸದಿಲ್ಲಿ, ಸೆ. 13: ದಿಲ್ಲಿಯ ತಾಜ್ ಪ್ಯಾಲೇಸ್ ಹೊಟೇಲ್ ಹಾಗೂ ಮ್ಯಾಕ್ಸ್ ಆಸ್ಪತ್ರೆಯ 2 ಶಾಖೆಗಳು ಶನಿವಾರ ಬಾಂಬ್ ಬೆದರಿಕೆಯ ಸಂದೇಶ ಸ್ವೀಕರಿಸಿವೆ.

ಚಾಣಕ್ಯಪುರಿಯ ಹೊಟೇಲ್ ತಾಜ್ ಪ್ಯಾಲೇಸ್ ಇಂದು ಮುಂಜಾನೆ ಬಾಂಬ್ ಬೆದರಿಕೆಯ ಈ ಮೇಲ್ ಸ್ವೀಕರಿಸಿತ್ತು. ಈ ಮೇಲ್‌ನಲ್ಲಿ ಹೊಟೇಲ್‌ನಲ್ಲಿ 16 ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಒಡ್ಡಿತ್ತು. ಬೆಳಗ್ಗೆ 11 ಗಂಟೆ ಒಳಗೆ ಹೊಟೇಲ್‌ನಿಂದ ತೆರವುಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ‘‘ಹೊಟೇಲ್‌ನಲ್ಲಿ ಹಲವು ವಿವಿಐಪಿಗಳು ಇದ್ದಾರೆ’’ ಎಂದು ಉಲ್ಲೇಖಿಸಿತ್ತು.

ಬಾಂಬ್ ನಿಷ್ಕ್ರಿಯ ದಳದೊಂದಿಗೆ ಪೊಲೀಸ್ ತಂಡಗಳು ಧಾವಿಸಿ ಹೊಟೇಲ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದವು. ‘‘ಬಾಂಬ್ ಬೆದರಿಕೆ ಶಿಷ್ಟಾಚಾರಕ್ಕೆ ಅನುಗುಣವಾಗಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಇದು ಹುಸಿ ಬಾಂಬ್ ಕರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ’’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸರಿಸುಮಾರು ಇದೇ ಸಮಯದಲ್ಲಿ ಶಾಲಿಮಾರ್‌ಬಾಗ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆ ಕೂಡ ಬಾಂಬ್ ಬೆದರಿಕೆಯ ಸಂದೇಶ ಸ್ವೀಕರಿಸಿತು. ‘‘ದಿಲ್ಲಿ ಪೊಲೀಸ್ ಹಾಗೂ ದಿಲ್ಲಿ ಅಗ್ನಿ ಶಾಮಕ ಸೇವೆ ಸ್ಥಳಕ್ಕೆ ಧಾವಿಸಿತು’’ ಎಂದು ದಿಲ್ಲಿ ಅಗ್ನಿಶಾಮಕ ಸೇವೆ ತಿಳಿಸಿದೆ. ಅನಂತರ ದ್ವಾರಕಾದಲ್ಲಿರುವ ಮ್ಯಾಕ್ಸ್ ಆಸ್ಪತ್ರೆ ಕೂಡ ಇದೇ ರೀತಿಯ ಬೆದರಿಕೆ ಸಂದೇಶ ಸ್ವೀಕರಿಸಿತು. ಪೊಲೀಸರು ಹಾಗೂ ಅಗ್ನಿ ಶಾಮಕ ಇಲಾಖೆಯ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ಅದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂತು’’ ಎಂದು ದಿಲ್ಲಿ ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ.

ಈಗ ದಿಲ್ಲಿ ಪೊಲೀಸ್‌ನ ಸೈಬರ್ ಸೆಲ್ ಕಳೆದ ಎರಡು ದಿನಗಳಲ್ಲಿ ಸ್ವೀಕರಿಸಲಾದ ಸರಣಿ ಬಾಂಬ್ ಬೆದರಿಕೆಯ ಇಮೇಲ್‌ಗಳ ಕುರಿತು ತನಿಖೆ ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News