×
Ad

ಅಮೆರಿಕದಿಂದ ಗಡಿಪಾರು: ಅಮೃತಸರದಲ್ಲಿ ಬಂದಿಳಿದ 119 ಮಂದಿ

Update: 2025-02-16 07:45 IST

PC: x.com/satnamkhalsa1

ಅಮೃತಸರ: ಅಮೆರಿಕದಿಂದ ಗಡಿಪಾರಾದ 119 ಮಂದಿಯನ್ನು ಕರೆತಂದ ಅಮೆರಿಕದ ವಿಶೇಷ ವಿಮಾನ ಶನಿವಾರ ರಾತ್ರಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅಕ್ರಮ ವಲಸೆಯನ್ನು ಮಟ್ಟಹಾಕುವ ಭರವಸೆಯೊಂದಿಗೆ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಗಡಿಪಾರುಗೊಂಡ ಎರಡನೇ ಭಾರತೀಯರ ತಂಡ ಇದಾಗಿದೆ.

ಈ ಬಾರಿ ಗಡಿಪಾರುಗೊಂಡಿರುವ 119 ಮಂದಿಯ ಪೈಕಿ 67 ಮಂದಿ ಪಂಜಾಬಿನವರು ಹಾಗೂ 33 ಮಂದಿ ಹರ್ಯಾಣದವರು. ಗುಜರಾತ್ ನ ಎಂಟು ಮಂದಿ, ಉತ್ತರ ಪ್ರದೇಶದ ಮೂವರು, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು, ಹಿಮಾಚಲ ಪ್ರದೇಶ ಮತ್ತು ಜಮ್ಮು & ಕಾಶ್ಮೀರದ ತಲಾ ಒಬ್ಬರು ಸೇರಿದ್ದಾರೆ.

ಇದಕ್ಕೂ ಮುನ್ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, "ಎರಡನೇ ಬ್ಯಾಚ್ ನಲ್ಲಿ ಗಡೀಪಾರುಗೊಂಡಿರುವ ಪಂಜಾಬಿಗಳನ್ನು ಅವರವರ ಹುಟ್ಟೂರಿಗೆ ಕರೆದೊಯ್ಯಲು ಸರ್ಕಾರ ವ್ಯವಸ್ಥೆ ಕಲ್ಪಿಸಿದೆ. ಅವರನ್ನು ಅವರವರ ಊರಿಗೆ ಕರೆದೊಯ್ಯಲು ನಮ್ಮ ವಾಹನಗಳು ಸಿದ್ಧವಾಗಿವೆ" ಎಂದು ಹೇಳಿಕೆ ನೀಡಿದ್ದರು.

ಸುಮಾರು 157 ಮಂದಿ ಗಡಿಪಾರುಗೊಂಡವರನ್ನು ಒಳಗೊಂಡ ಮೂರನೇ ವಿಮಾನ ಭಾನುವಾರ ಸಂಜೆ ಅಮೃತಸರಕ್ಕೆ ಬರುವ ನಿರೀಕ್ಷೆ ಇದೆ ಎಂದು ಪಿಟಿಐ ವರದಿ ಮಾಡಿದೆ.

ಇದಕ್ಕೂ ಮುನ್ನ ಅಮೆರಿಕ ವಾಯುಪಡೆಯ ವಿಮಾನ ಫೆಬ್ರುವರಿ 5ರಂದು 104 ಮಂದಿ ಭಾರತೀಯರನ್ನು ಕರೆತಂದಿದ್ದು, ಅವರಿಗೆ ಕೈತೋಳ ತೊಡಿಸಿ ಕಾಲಿಗೆ ಸರಪಣಿ ಬಿಗಿದದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತ ಕೂಡಾ ಅಮೆರಿಕಕ್ಕೆ ತನ್ನ ಅಸಮಾಧಾನ ಸೂಚಿಸಿತ್ತು.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News