×
Ad

Fact Check |‌ ಕಳೆದು ಹೋದ ನೆಕ್ಲೇಸ್‌ಗಾಗಿ ಅಳುತ್ತಿರುವ ಮಹಿಳೆಯ ಈ ವೀಡಿಯೊ ಮಹಾ ಕುಂಭಮೇಳಕ್ಕೆ ಸಂಬಂಧಿಸಿಲ್ಲ...

Update: 2025-01-24 17:36 IST

 PC : factly.in

ಹೊಸದಿಲ್ಲಿ: ಮಹಿಳೆಯೋರ್ವರು ತನ್ನ ನೆಕ್ಲೇಸ್‌ ಅನ್ನು ಯಾರೋ ಕದ್ದಿದ್ದಾರೆ ಎಂದು ಗೋಳಿಡುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮಹಿಳೆ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ತನ್ನ ಒಂದೂವರೆ ಲ.ರೂ.ಮೌಲ್ಯದ ನೆಕ್ಲೇಸ್ ಕಳೆದುಕೊಂಡಿದ್ದಾರೆ ಎಂಬ ಅಡಿಬರಹದೊಂದಿಗೆ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

Full View

ಸುದ್ದಿಸಂಸ್ಥೆಯು ಈ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಈ ಘಟನೆ ಮಹಾ ಕುಂಭಮೇಳದಲ್ಲಿ ನಡೆದಿದ್ದಲ್ಲ ಎನ್ನುವುದು ಕಂಡು ಬಂದಿದೆ. ವೀಡಿಯೊ 2014,ಡಿ.14ರಂದು ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದದ ಹಳೆಯ ಘಟನೆಯದಾಗಿದೆ. ಹೀಗಾಗಿ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿನ ಹೇಳಿಕೆ ಅಪ್ಪಟ ಸುಳ್ಳಾಗಿದೆ.

ಸುದ್ದಿಸಂಸ್ಥೆಯು ವೈರಲ್ ವೀಡಿಯೊದಲ್ಲಿನ ಕೆಲವು ಕೀಫ್ರೇಮ್‌ಗಳನ್ನು ಬಳಸಿ ನಡೆಸಿದ ರಿವರ್ಸ್ ಇಮೇಜ್ ಸರ್ಚ್ ತಿಂಗಳ ಹಿಂದೆ ʼದೈನಿಕ್ ಭಾಸ್ಕರ್‌ʼನಲ್ಲಿ ಪ್ರಕಟಗೊಂಡಿದ್ದ ವರದಿಯನ್ನು ತೋರಿಸಿತ್ತು. ಈ ವರದಿ ಹರ್ದೋಯಿಯಲ್ಲಿ ನಡೆದಿದ್ದ ಲೂಟಿ ಘಟನೆಗೆ ಸಂಬಂಧಿಸಿತ್ತು.

 PC : factly.in

 

ವರದಿಯಂತೆ ಲಕ್ಷ್ಮಿ ಶ್ರೀವಾಸ್ತವ ಎಂಬ ಮಹಿಳೆ ಹರ್ದೋಯಿಯಲ್ಲಿ 2024,ಡಿ.14ರಂದು ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತನ್ನ ಚಿನ್ನದ ನೆಕ್ಲೇಸ್ ಕಳೆದುಕೊಂಡಿದ್ದರು.

ಈ ಬಗ್ಗೆ ಅಲ್ಲಿಯ ಪೋಲಿಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ತಾನು ಮನೆಗೆ ಮರಳಿದ ಬಳಿಕ ಅಲ್ಲಿಯೇ ಬಿಟ್ಟಿದ್ದ ನೆಕ್ಲೇಸ್ ಪತ್ತೆಯಾಗಿದೆ ಎಂದು ಲಕ್ಷ್ಮಿ ನಂತರ ಪೋಲಿಸರಿಗೆ ಮಾಹಿತಿ ನೀಡಿದ್ದರು.

ಹಳೆಯ ವೀಡಿಯೊವನ್ನೇ ಮಹಾ ಕುಂಭಮೇಳದೊಂದಿಗೆ ತಳುಕು ಹಾಕಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿತ್ತು ಎನ್ನುವುದು ಸ್ಪಷ್ಟಗೊಂಡಿದೆ.

PC : factly.in

 PC : factly.in


ಈ ಲೇಖನವನ್ನು ಮೊದಲು factly.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್‌ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - factly.in

contributor

Similar News