×
Ad

ಆಲ್ಟ್‌ ನ್ಯೂಸ್‌ ಸಹ-ಸ್ಥಾಪಕ ಮುಹಮ್ಮದ್‌ ಝುಬೇರ್ ಗೆ ‘2023 ಫ್ರೀಡಂ ಆಫ್‌ ಎಕ್ಸ್‌ಪ್ರೆಶನ್‌ ಅವಾರ್ಡ್‌’

Update: 2023-10-20 12:07 IST

ಮುಹಮ್ಮದ್‌ ಝುಬೇರ್

ಹೊಸದಿಲ್ಲಿ: ಇಂಡೆಕ್ಸ್‌ ಆನ್‌ ಸೆನ್ಸಾರ್‌ಶಿಪ್‌ ನೀಡುವ ಪತ್ರಿಕೋದ್ಯಮ ಕ್ಷೇತ್ರದ ‘2023 ಫ್ರೀಡಂ ಆಫ್‌ ಎಕ್ಸ್‌ಪ್ರೆಶನ್‌ ಅವಾರ್ಡ್‌’ ಅನ್ನು ಆಲ್ಟ್‌ ನ್ಯೂಸ್‌ ಸಹ-ಸ್ಥಾಪಕ ಮುಹಮ್ಮದ್‌ ಝುಬೇರ್ ಗೆದ್ದಿದ್ದಾರೆ.

“ಆಡಳಿತ ಪಕ್ಷದ ಪ್ರಭಾವಿ ಸದಸ್ಯರು ಪ್ರಚುರಪಡಿಸಿದ ತಪ್ಪು ಮಾಹಿತಿಯನ್ನು ಅನಾವರಣಗೊಳಿಸಿದ ನಂತರ ಝುಬೇರ್ ಸಾಕಷ್ಟು ಬೆದರಿಕೆಗಳನ್ನು ಎದುರಿಸಿದ್ದಾರೆ,” ಎಂದು ಇಂಡೆಕ್ಸ್‌ ಆನ್‌ ಸೆನ್ಸಾರ್‌ಶಿಪ್‌ ಹೇಳಿದೆ. ಇಂಡೆಕ್ಸ್‌ ಆನ್‌ ಸೆನ್ಸಾರ್‌ಶಿಪ್‌ ಲಂಡನ್‌ ಮೂಲದ ಲಾಭೋದ್ದೇಶ ರಹಿತ ಸಂಸ್ಥೆಯಾಗಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ಉದ್ದೇಶಗಳಿಗಾಗಿ ಹೋರಾಡುತ್ತಿದೆ.

ವಿಜೇತರಿಗೆ ಲಂಡನ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಹಾಗೂ ಅವರ ಕೆಲಸ ಕಾರ್ಯಗಳಿಗೆ ಆರ್ಥಿಕ ಬೆಂಬಲವೂ ದೊರೆಯಲಿದೆ.

ತಮಗೆ ದೊರೆತ ಈ ಗೌರವವು ತಮ್ಮ ಯುವ ಸಹೋದ್ಯೋಗಿಗಳಿಗೆ ಆಶಾಕಿರಣವಾಗಲಿದೆ ಎಂದು ಝುಬೇರ್ ಹೇಳಿದ್ದಾರೆ.

“ಭಾರತದಲ್ಲಿ ತಪ್ಪು ಮಾಹಿತಿ ಹಾಗೂ ನಕಲಿ ಸುದ್ದಿಗಳು ರಾಕ್ಷಸ ರೂಪ ತಾಳಿರುವಂತಹ ಸಂದರ್ಭದಲ್ಲಿ ಈ ಪ್ರಶಸ್ತಿ ಪಡೆಯುವುದು ಗೌರವವಾಗಿದೆ,” ಎಂದು ಝುಬೇರ್ ಅವರು ಇಂಡೆಕ್ಸ್‌ ಆನ್‌ ಸೆನ್ಸಾರ್‌ಶಿಪ್‌ ಪೋಸ್ಟ್‌ ಮಾಡಿರುವ ವೀಡಿಯೋದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News