×
Ad

ದಿಲ್ಲಿ ಚುನಾವಣೆ | ನಕಲಿ ಮತದಾನ ಆರೋಪಿಸಿದ ಎಎಪಿ, ಬಿಜೆಪಿ

Update: 2025-02-05 18:55 IST

Photo | PTI

ಹೊಸದಿಲ್ಲಿ : ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಪೂರ್ಣಗೊಂಡಿದ್ದು, ಸೀಲಾಂಪುರ ಮತ್ತು ಕಸ್ತೂರ್ಬಾ ನಗರದಲ್ಲಿ ನಕಲಿ ಮತದಾನವಾಗಿರುವ ಬಗ್ಗೆ ಬಿಜೆಪಿ ಮತ್ತು ಎಎಪಿ ಆರೋಪಗಳನ್ನು ಮಾಡಿದೆ.

ಸೀಲಾಂಪುರ ಮತ್ತು ಕಸ್ತೂರ್ಬಾ ನಗರ ಸೇರಿದಂತೆ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ನಕಲಿ ಮತದಾನದ ಆರೋಪಗಳು ಕೇಳಿ ಬಂದಿದೆ. ಸೀಲಾಂಪುರದಲ್ಲಿ ಬುರ್ಖಾ ಧರಿಸಿ ಬಂದ ಕೆಲವರು ನಕಲಿ ಮತ ಚಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರೋರ್ವರು ಆರೋಪಿಸಿದ್ದಾರೆ. ಆದರೆ, ಈ ಕುರಿತ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.

ಕಸ್ತೂರ್ಬಾ ನಗರದಲ್ಲಿ ಇಬ್ಬರು ನಕಲಿ ಮತ ಚಲಾಯಿಸಲು ಪ್ರಯತ್ನಿಸಿರುವ ಆರೋಪ ಕೇಳಿ ಬಂದಿದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರೇಟರ್ ಕೈಲಾಶ್ ಕ್ಷೇತ್ರದ ಎಎಪಿ ಅಭ್ಯರ್ಥಿ ಸೌರಭ್ ಭಾರದ್ವಾಜ್ ಮಾತನಾಡಿ, ಚಿರಾಗ್ ಡಿಲ್ಲಿಯಲ್ಲಿ ಮತ ಚಲಾವಣೆಗೆ ಅಡ್ಡಿಪಡಿಸಲಾಗಿದೆ. ಮತಗಟ್ಟೆಗಳಿಗೆ ತೆರಳದಂತೆ ಬ್ಯಾರಿಕೇಡ್‌ ಗಳನ್ನು ಅಳವಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಜಂಗ್ ಪುರದಲ್ಲಿ ಮನೆಯೊಂದರಲ್ಲಿ ಹಣವನ್ನು ಹಂಚಲಾಗಿದೆ ಎಂದು ಎಎಪಿ ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ಸೀಲಾಂಪುರದಲ್ಲಿ ನಕಲಿ ಮತದಾನದ ಆರೋಪದ ನಂತರ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ. ದಿಲ್ಲಿ ಪೊಲೀಸರು ಈ ಕುರಿತ ಆರೋಪಗಳನ್ನು ತಳ್ಳಿಹಾಕಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News