×
Ad

ಬ್ರಿಜ್ ಭೂಷಣ್ ನ ಲೈಂಗಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯೋಚಿಸಿದ್ದೆ: ಮಹಿಳಾ ಕುಸ್ತಿಪಟು ಪ್ರತಿಪಾದನೆ

Update: 2023-07-19 21:57 IST

ಹೊಸದಿಲ್ಲಿ: ಲೈಂಗಿಕ ಕಿರುಕುಳದಿಂದ ತಾನು ಖಿನ್ನತೆಗೆ ಒಳಗಾಗಿದ್ದೆ ಹಾಗೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಯೋಚನೆ ಬಂದಿತ್ತು ಎಂದು ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ ಮಹಿಳಾ ಕುಸ್ತಿಪಟು ಹೇಳಿದ್ದಾರೆ.

ಉತ್ತರಪ್ರದೇಶದ ಕೈಸರ್ಗಂಜ್ ನ ಬಿಜೆಪಿ ಸಂಸದ ಕೂಡ ಆಗಿರುವ ಸಿಂಗ್ ವಿರುದ್ಧ ಕಳೆದ ತಿಂಗಳು ಸಲ್ಲಿಸಿರುವ ಆರೋಪ ಪಟ್ಟಿ ಯುವತಿಯ ಈ ಹೇಳಿಕೆಯನ್ನು ಒಳಗೊಂಡಿದೆ.1599 ಪುಟಗಳ ಈ ಆರೋಪ ಪಟ್ಟಿ 6 ಮಹಿಳಾ ಕುಸ್ತಿಪಟುಗಳ ಹೇಳಿಕೆ ಇವೆ.

ಸಿಂಗ್ನನ್ನು ಭೇಟಿಯಾಗಲು ನಿರಾಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ತನ್ನ ಹೆಸರನ್ನು ಅತ್ಲೆಟ್ಗಳ ಪಟ್ಟಿಯಿಂದ ತೆಗೆಯಲಾಯಿತು ಎಂದು ಮಹಿಳಾ ಕುಸ್ತಿಪಟು ಆರೋಪಿಸಿದ್ದಾರೆ. 2009ರಲ್ಲಿ ಸಿಂಗ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರಾಕರಿಸಿರುವುದರಿಂದ, ಕಳೆದ ಎರಡು ವರ್ಷಗಳಿಂದ ಕುಸ್ತಿ ಅಖಾಡಕ್ಕೆ ತನಗೆ ಹಿಂದಿರುಗಲು ಸಾಧ್ಯವಾಗಲಿಲ್ಲ ಎಂದು ಇನ್ನೋರ್ವ ಕುಸ್ತಿಪಟು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News