×
Ad

ಎಫ್ಐಎಚ್ ವಿಶ್ವ ರ‍್ಯಾಂಕಿಂಗ್ : ನಾಲ್ಕನೇ ಸ್ಥಾನಕ್ಕೆ ಕುಸಿದ ಭಾರತ

Update: 2024-03-12 22:00 IST

Photo: X 

ಹೊಸದಿಲ್ಲಿ : ಭಾರತ ಮಂಗಳವಾರ ಬಿಡುಗಡೆಯಾದ ಎಫ್ಐಎಚ್ ಪುರುಷರ ವರ್ಲ್ಡ್ ರ್ಯಾಂಕಿಂಗ್ ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಎಫ್ಐಎಚ್ ಹಾಕಿ ಒಲಿಂಪಿಕ್ಸ್ ಕ್ವಾಲಿಫೈಯರ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಜರ್ಮನಿ ಮೂರನೇ ಸ್ಥಾನಕ್ಕೇರಿದೆ.

ಕಳೆದ ವರ್ಷ ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತವು ಪ್ಯಾರಿಸ್ ಒಲಿಂಪಿಕ್ಸ್ ಗೆ ನೇರ ಪ್ರವೇಶ ಪಡೆದಿದ್ದು, ಇತ್ತೀಚೆಗೆ ಕೊನೆಗೊಂಡಿರುವ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಆಡುವ ಅಗತ್ಯ ಬೀಳಲಿಲ್ಲ.

ಒಮಾನ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಎರಡರಲ್ಲಿ ಜಯ, ಎರಡರಲ್ಲಿ ಡ್ರಾ ಸಾಧಿಸಿ ಅಜೇಯ ಗೆಲುವಿನ ಓಟ ಮುಂದುವರಿಸಿದ್ದ ಜರ್ಮನಿ ರ್ಯಾಂಕಿಂಗ್ ನಲ್ಲಿ ಪ್ರಗತಿ ಸಾಧಿಸಿದೆ.

ನೆದರ್ಲ್ಯಾಂಡ್ಸ್ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಸ್ಪೇನ್ ನಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬೆಲ್ಜಿಯಮ್ ಎರಡನೇ ಸ್ಥಾನದಲ್ಲಿದೆ.

ಭಾರತದಲ್ಲಿ ನಡೆದಿದ್ದ ಎಫ್ಐಎಚ್ ಪ್ರೊ ಲೀಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯ 5ನೇಸ್ಥಾನಕ್ಕೇರಿದೆ. ಅರ್ಜೆಂಟೀನ ಹಾಗೂ ಸ್ಪೇನ್ ಕ್ರಮವಾಗಿ 7ನೇ ಹಾಗೂ 8ನೇ ಸ್ಥಾನದಲ್ಲಿವೆ. ಫ್ರಾನ್ಸ್ 9ನೇ ಸ್ಥಾನ ಪಡೆದರೆ, ನ್ಯೂಝಿಲ್ಯಾಂಡ್ ಅಗ್ರ-10ಕ್ಕೆ ವಾಪಸಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News