×
Ad

ಅಸ್ಸಾಂನಲ್ಲಿ ಮೊದಲ ಜಿಬಿಎಸ್ ಸೋಂಕಿತ ಮೃತ್ಯು; ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆ

Update: 2025-02-02 07:30 IST

ಸಾಂದರ್ಭಿಕ ಚಿತ್ರ PC:  x.com/the_hindu

ಪುಣೆ/ ಗುವಾಹತಿ: ಗುಲಿಯನ್-ಬರ್ರೆ ಸಿಂಡ್ರೋಮ್ (ಜಿಬಿಎಸ್) ಸೋಂಕಿನಿಂದ ಮಹಾರಾಷ್ಟ್ರದಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ ಐದಕ್ಕೇರಿದೆ. ಅದೇ ರೀತಿ ಅಸ್ಸಾಂನಲ್ಲಿ ಮೊಟ್ಟಮೊದಲ ಜಿಬಿಎಸ್ ಸಾವಿನ ಪ್ರಕರಣ ವರದಿಯಾಗಿದೆ. ಪುಣೆಯಲ್ಲಿ ಆಸ್ಪತ್ರೆಗೆ ದಾಖಲಾದ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಒಂದೇ ದಿನ ಒಂಬತ್ತು ಮಂದಿ ದಾಖಲಾಗುವ ಮೂಲಕ ಆಸ್ಪತ್ರೆಗೆ ದಾಖಲಾದವರ ಒಟ್ಟು ಸಂಖ್ಯೆ 149ಕ್ಕೇರಿದೆ.

ಪುಣೆಯ ಸಸೂನ್ ಆಸ್ಪತ್ರೆಯಲ್ಲಿ ಜನವರಿ 16ರಿಂದ ಚಿಕಿತ್ಸೆ ಪಡೆಯುತ್ತಿದ್ದ ನಂದೇಡ್ ಗಾಂವ್ ನ 60 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಗುವಾಹತಿಯ ಪ್ರತೀಕ್ಷಾ ಆಸ್ಪತ್ರೆಗೆ ಜನವರಿ 21ರಂದು ದಾಖಲಾಗಿದ್ದ 17 ವರ್ಷದ ಯುವತಿ ಕೊನೆಯುಸಿರೆಳೆದಿದ್ದಾರೆ. ಇದು ಮಹಾರಾಷ್ಟ್ರ ಹೊರತುಪಡಿಸಿದರೆ ರಾಷ್ಟ್ರದ ಇತರ ಭಾಗಗಳಲ್ಲಿ ವರದಿಯಾದ ಮೊಟ್ಟಮೊದಲ ಅಧಿಕೃತ ಜಿಬಿಎಸ್ ಸಾವಿನ ಪ್ರಕರಣ ಎನಿಸಿಕೊಂಡಿದೆ. ಅಸ್ಸಾಂನಲ್ಲಿ ಕಳೆದ ವಾರ 10 ಹಾಗೂ 17 ವರ್ಷದ ಇಬ್ಬರು ಬಾಲಕರು ಮೃತಪಟ್ಟಿದ್ದರೂ ಅದು ಜಿಬಿಎಸ್ ಸಾವು ಎಂದು ದೃಢಪಟ್ಟಿಲ್ಲ.

ಪುಣೆಯಲ್ಲಿ ಜಿಬಿಎಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ತೀವ್ರ ಸ್ಥಿತಿಯಲ್ಲಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಪುಣೆಯ ಒಂದೇ ಪ್ರದೇಶದಲ್ಲಿ ಶುಕ್ರವಾರದ ವರೆಗೆ ಐಸಿಯುನಲ್ಲಿ ದಾಖಲಾಗಿರುವವರ ಸಂಖ್ಯೆ 83ಕ್ಕೇರಿದೆ. ವೆಂಟಿಲೇಟರ್ ಬೆಂಬಲದಲ್ಲಿರುವವರ ಸಂಖ್ಯೆ ಕೂಡಾ 18ರಿಂದ 28ಕ್ಕೇರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News