LIVE UPDATES| ಗುಜರಾತ್‌ನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ
Photo credit: indiatoday.in
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ವಿಮಾನವೊಂದು ಗುರುವಾರ ಪತನಗೊಂಡಿದ್ದು, ಅಪಘಾತಕ್ಕೀಡಾದ ವಿಮಾನದ ಭಾಗಗಳಿಂದ ಹೊಗೆ ಬರುತ್ತಿರುವ ದೃಶ್ಯಗಳು ಕಂಡುಬಂದಿವೆ.
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ. ಅಪಘಾತದ ಸ್ಥಳದಲ್ಲಿ ಹೊಗೆ ಬರುತ್ತಿರುವುದನ್ನು ದೃಶ್ಯಗಳು ತೋರಿಸಿವೆ ಮತ್ತು ಟೇಕ್ ಆಫ್ ಆಗುವ ಸಮಯದಲ್ಲಿ ಅಪಘಾತ ಸಂಭವಿಸಿದೆ ಎಂದು ಆರಂಭಿಕ ವರದಿಗಳು ಹೇಳಿವೆ.
ಅಪಘಾತದ ನಂತರ ಏಳು ಅಗ್ನಿಶಾಮಕ ವಾಹನಗಳು ಸೇರಿದಂತೆ ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿದವು.
ವಿಮಾನ ಅಪಘಾತ ದೃಢಪಡಿಸಿದ ಏರ್ ಇಂಡಿಯಾ:
ಈ ಕುರಿತು ಹೇಳಿಕೆ ನೀಡಿದ ಏರ್ ಇಂಡಿಯಾ, ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ AI171 ವಿಮಾನವು ಅಪಘಾತಕ್ಕೀಡಾಗಿದೆ ಎಂಬುದನ್ನು ಗುರುವಾರ ದೃಢಪಡಿಸಿದೆ.
airindia.com ಮತ್ತು ನಮ್ಮ X ಹ್ಯಾಂಡಲ್‌ನಲ್ಲಿ ಸಾಧ್ಯವಾದಷ್ಟು ಬೇಗ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುತ್ತೇವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ
ಸ್ಥಳಕ್ಕೆ ತಲುಪಿದ ಎರಡು ಡಜನ್ಗೂ ಹೆಚ್ಚು ಆಂಬ್ಯುಲೆನ್ಸ್‌ಗಳು
ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನ 825 ಅಡಿ ಎತ್ತರದಲ್ಲಿದ್ದಾಗ ಇದ್ದಕ್ಕಿದ್ದಂತೆ ಕೆಳಗಿಳಿದು ಪತನವಾಗಿದೆ.
ವಿಮಾನಯಾನ ಸಚಿವರೊಂದಿಗೆ ಪ್ರಧಾನಿ ಮೋದಿ ಮಾತುಕತೆ
ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸ್ಥಗಿತ
ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಆಘಾತ ವ್ಯಕ್ತಪಡಿಸಿದ ವಿಮಾನಯಾನ ಸಚಿವ
ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಟಾಟಾ ಅಧ್ಯಕ್ಷರು
ವಿಮಾನ ಪತನವನ್ನು ದೃಢಪಡಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ( DGCA)
ಮಧ್ಯಾಹ್ನ 1.39ಕ್ಕೆ ಅಹ್ಮದಾಬಾದ್‌ನಿಂದ ಟೇಕ್ಆಪ್ ಆಗಿದ್ದ ವಿಮಾನ