ಚಿನಿವಾರ ಪೇಟೆ | ಚಿನ್ನದ ದರದಲ್ಲಿ ಏರಿಕೆ; 1 ಗ್ರಾಂ ಚಿನ್ನಕ್ಕೆ ಎಷ್ಟು ರೇಟು?
ಸಾಂದರ್ಭಿಕ ಚಿತ್ರ | Photo Credit : freepik.com
ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಬುಧವಾರ ಅ. 29ರಂದು ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಏರಿಳಿತ ಕಂಡಿದ್ದ ಚಿನ್ನದ ದರಗಳು ಇಂದು ಮತ್ತೆ ಏರುಮುಖ ತೋರಿಸಿವೆ.
ಚೆನ್ನೈ, ಬೆಂಗಳೂರು, ಹೈದರಾಬಾದ್, ಮುಂಬೈ ಹಾಗೂ ದಿಲ್ಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 12,158 ರೂ. ಆಗಿದ್ದು, ಇದು ಹಿಂದಿನ ದಿನಕ್ಕಿಂತ 76 ರೂಪಾಯಿ ಹೆಚ್ಚಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,145 ಆಗಿದ್ದು 70 ರೂಪಾಯಿ ಏರಿಕೆಯಾಗಿದೆ. 18 ಕ್ಯಾರೆಟ್ ಚಿನ್ನದ ದರವು ಪ್ರತಿ ಗ್ರಾಂಗೆ 9,119 ಕ್ಕೆ ಏರಿಕೆಯಾಗಿ 57 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯ ಚಲನೆ, ಡಾಲರ್ ಮೌಲ್ಯ ಹಾಗೂ ಆರ್ಥಿಕ ಅಸ್ಥಿರತೆಗಳು ಚಿನ್ನದ ಬೆಲೆ ಏರಿಕೆಗೆ ಕಾರಣ ಎಂದು ತಜ್ಞರು ಹೇಳುತ್ತಾರೆ.
24 ಕ್ಯಾರೆಟ್ ಚಿನ್ನವನ್ನು ಸಾಮಾನ್ಯವಾಗಿ ಹೂಡಿಕೆ ಉದ್ದೇಶಕ್ಕೆ ಬಳಸಲಾಗುತ್ತಿದ್ದು, ಇದು ಅತ್ಯಂತ ಶುದ್ಧ ಹಾಗೂ ಚಿನ್ನದ ದುಬಾರಿ ರೂಪವಾಗಿದೆ. 22 ಮತ್ತು 18 ಕ್ಯಾರೆಟ್ ಚಿನ್ನವನ್ನು ಆಭರಣ ತಯಾರಿಕೆಗೆ ಹೆಚ್ಚಾಗಿ ಉಪಯೋಗಿಸಲಾಗುತ್ತದೆ.