×
Ad

ಜಾರ್ಖಂಡ್ | ಬೊಕಾರೊ ಬಳಿ ಹಳಿತಪ್ಪಿದ ಗೂಡ್ಸ್ ರೈಲು; 15 ರೈಲುಗಳ ಮಾರ್ಗ ಬದಲು

Update: 2024-09-26 10:54 IST
Photo: ANI

ರಾಂಚಿ : ಜಾರ್ಖಂಡ್‌ನ ಬೊಕಾರೊದ ತುಪ್ಕಡಿಹ್ ನಿಲ್ದಾಣದ ಬಳಿ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿತಪ್ಪಿದ ಪರಿಣಾಮ ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಸಂಚರಿಸುವ ಹದಿನೈದು ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಬೊಕಾರೊ ಜಿಲ್ಲೆಯ ತುಪ್ಕಾಡಿಹ್ ನಿಲ್ದಾಣದ ಬಳಿ ಉಕ್ಕು ಹೊತ್ತೊಯ್ಯುತ್ತಿದ್ದ ಸರಕು ಸಾಗಣೆ ರೈಲುಗಳ ಎರಡು ಬೋಗಿಗಳು ಹಳಿತಪ್ಪಿದೆ. 14 ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ 15 ರೈಲುಗಳನ್ನು ಬೇರೆಡೆಗೆ ತಿರುಗಿಸಿದ್ದೇವೆ ಎಂದು ಆಗ್ನೇಯ ವಿಭಾಗದ ಆದ್ರಾ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಸುಮಿತ್ ನರುಲಾ ತಿಳಿಸಿದ್ದಾರೆ.

ಗೂಡ್ಸ್ ರೈಲು ಬೊಕಾರೊ ಸ್ಟೀಲ್ ಪ್ಲಾಂಟ್‌ನಿಂದ ಉಕ್ಕಿನ ಸರಕುಗಳನ್ನು ಸಾಗಿಸುತ್ತಿತ್ತು. ತುಪ್ಕಡಿಹ್ ಮತ್ತು ಬೊಕಾರೊ ನಿಲ್ದಾಣಗಳ ನಡುವಿನ ಮುಖ್ಯ ಮಾರ್ಗದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ತುಪ್ಕಡಿಹ್ ನಿಲ್ದಾಣದ ಉತ್ತರ ಕ್ಯಾಬಿನ್ ಯಾರ್ಡ್ ಬಳಿ ಘಟನೆ ಸಂಭವಿಸಿರುವುದರಿಂದ ಬೊಕಾರೊ-ಗೊಮೊ ನಡುವಿನ ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News