×
Ad

ʼಸುಪ್ರೀಂʼ ಆದೇಶ ಧಿಕ್ಕರಿಸಿ 300 ವರ್ಷ ಹಳೆಯ ದರ್ಗಾ ನೆಲಸಮ; ಗುಜರಾತ್ ಹೈಕೋರ್ಟ್ ನಿಂದ ಜುನಾಗಡ ಮುನ್ಸಿಪಲ್ ಆಯುಕ್ತರಿಗೆ ನ್ಯಾಯಾಂಗ ನಿಂದನೆ ನೋಟಿಸ್

Update: 2025-07-01 19:15 IST

ಗುಜರಾತ್ ಹೈಕೋರ್ಟ್ | PTI 

ಅಹ್ಮದಾಬಾದ್: 300 ವರ್ಷಗಳಷ್ಟು ಹಳೆಯದು ಎನ್ನಲಾದ ಹಜ್ರತ್ ಜೋಕ್ ಅಲಿಶಾ ದರ್ಗಾವನ್ನು ನೆಲಸಮಗೊಳಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಗುಜರಾತ್ ರಾಜ್ಯ ಸರಕಾರದ ನೀತಿಯನ್ನು ಧಿಕ್ಕರಿಸಿದ್ದಕ್ಕಾಗಿ ಗುಜರಾತ್ ಉಚ್ಚ ನ್ಯಾಯಾಲಯವು ಜುನಾಗಡ ಮಹಾನಗರ ಪಾಲಿಕೆ(ಜೆಎಂಸಿ) ಆಯುಕ್ತ ಮತ್ತು ಹಿರಿಯ ನಗರ ಯೋಜಕರಿಗೆ ನ್ಯಾಯಾಂಗ ನಿಂದನೆ ನೋಟಿಸನ್ನು ಹೊರಡಿಸಿದೆ.

ಸರ್ವೋಚ್ಚ ನ್ಯಾಯಾಲಯದ 31.08.2018ರ ಆದೇಶವನ್ನು ಉದ್ದೇಶಪೂರ್ವಕವಾಗಿ ಧಿಕ್ಕರಿಸಿ ದರ್ಗಾವನ್ನು ನೆಲಸಮಗೊಳಿಸಲಾಗಿದೆ ಎಂದು ಆರೋಪಿಸಿ ದರ್ಗಾದ ಟ್ರಸ್ಟಿಗಳು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ನಡೆಸುತ್ತಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶವಿದ್ದರೂ ಹಿರಿಯ ನಗರ ಯೋಜಕ ವಿವೇಕ್ ಕಿರಣ್ ಪಾರೇಖ್ ಅವರು 31.01.2025ರಂದು ದರ್ಗಾ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ, ಭೂಮಿಯ ಮಾಲಕತ್ವ ಮತ್ತು ದರ್ಗಾ ನಿರ್ಮಾಣ ಕುರಿತು ಅಗತ್ಯ ದಾಖಲೆಗಳು ಮತ್ತು ಪುರಾವೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದರು. ಇಲ್ಲದಿದ್ದರೆ ಅನಧಿಕೃತ ಕಟ್ಟಡವೆಂದು ಪರಿಗಣಿಸಿ ದರ್ಗಾವನ್ನು ನೆಲಸಮಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

03.02.2025ರಂದು ನೋಟಿಸ್‌ ಗೆ ಉತ್ತರಿಸಿದ್ದ ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲೇಖಿಸಿದ್ದರು ಮತ್ತು ಅದರ ಪ್ರಕಾರ ಕಟ್ಟಡವನ್ನು ಸಕ್ರಮಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು.

ಇದರ ನಂತರವೂ ಹಲವು ನೋಟಿಸ್ಗಳು ಬಂದಿದ್ದು,ದರ್ಗಾ ಅಧಿಕಾರಿಗಳು ಸೂಕ್ತ ಉತ್ತರಗಳೊಂದಿಗೆ ಪೂರಕ ದಾಖಲೆಗಳನ್ನು ಸಲ್ಲಸಿದ್ದರು, ಆದರೂ ಜೆಎಂಸಿ 17.04.2025ರಂದು ದರ್ಗಾವನ್ನು ನೆಲಸಮಗೊಳಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News