×
Ad

ಗುಜರಾತ್ | ಟಾಯ್ಲೆಟ್‌ನಿಂದಲೇ ಹೈಕೋರ್ಟ್ ವೀಡಿಯೊ ಕಲಾಪಕ್ಕೆ ಹಾಜರು : ವಿಲಕ್ಷಣ ಘಟನೆಯ ದೃಶ್ಯ ವೈರಲ್

Update: 2025-06-27 19:58 IST

Photo | barandbench

ಅಹ್ಮದಾಬಾದ್ : ಗುಜರಾತ್‌ನಲ್ಲಿ ವ್ಯಕ್ತಿಯೋರ್ವ ಶೌಚಾಲಯದಿಂದಲೇ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರುವ ವಿಲಕ್ಷಣ ಘಟನೆಯ ವಿಡಿಯೋ ವೈರಲ್ ಆಗಿದೆ.

ಜೂನ್ 20ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾದ ವಿಚಾರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಚೆಕ್ ಬೌನ್ಸ್ ಪ್ರಕರಣದ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದರು.

ಒಂದು ನಿಮಿಷದ ವೀಡಿಯೊದಲ್ಲಿ 'ಸಮದ್ ಬ್ಯಾಟರಿ' ಎಂದು ಲಾಗಿನ್ ಹೆಸರನ್ನು ಹೊಂದಿದ್ದ ವ್ಯಕ್ತಿ, ಮೊಬೈಲ್ ಫೋನ್ ಅನ್ನು ನೆಲದ ಮೇಲೆ ಇಟ್ಟುಕೊಂಡು ಟಾಯ್ಲೆಟ್ ಸೀಟಿನಲ್ಲಿ ಇಯರ್‌ಫೋನ್‌ ಧರಿಸಿ ಕುಳಿತಿರುವುದು ಕಂಡುಬಂದಿದೆ.

ವಿಡಿಯೋದಲ್ಲಿ ಕೋರ್ಟ್‌ನಲ್ಲಿ ವಿಚಾರಣೆಯ ವೇಳೆ ವಕೀಲರು ವಾದವನ್ನು ಮಂಡಿಸುತ್ತಿರುವುದು ಕೂಡ ಕಂಡು ಬಂದಿದೆ.

ನ್ಯಾಯಾಲಯದ ದಾಖಲೆಗಳ ಪ್ರಕಾರ, ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಈತ  ಪ್ರತಿವಾದಿಯಾಗಿ ಹಾಜರಾಗಿದ್ದ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News