×
Ad

ಕಚೇರಿಯಲ್ಲೇ HDFC ಉದ್ಯೋಗಿ ಸಂಶಯಾಸ್ಪದ ಸಾವು; ಪೊಲೀಸರಿಂದ ತನಿಖೆ

Update: 2024-09-25 13:07 IST

ಸದಾಫ್ ಫಾತಿಮಾ (Photo: NDTV)

ಹೊಸದಿಲ್ಲಿ: HDFC ಬ್ಯಾಂಕ್ ಉದ್ಯೋಗಿಯೊಬ್ಬರು ಕಚೇರಿಯಲ್ಲಿ ಕೆಲಸ ಮಾಡುವಾಗಲೇ ಕುರ್ಚಿಯಿಂದ ಕುಸಿದು ಬಿದ್ದು, ಹಠಾತ್ ಮೃತಪಟ್ಟಿರುವ ಘಟನೆ ಲಕ್ನೊದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಉದ್ಯೋಗಿಯನ್ನು ಸದಾಫ್ ಫಾತಿಮಾ (45) ಎಂದು ಗುರುತಿಸಲಾಗಿದ್ದು, ಅವರು ವಿಭೂತಿಖಂಡ್ ನ HDFC ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

“ಮೃತದೇಹದ ಪಂಚನಾಮೆಯನ್ನು ನಡೆಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮರಣದ ನಿಖರ ಕಾರಣ ಗೊತ್ತಾಗಲಿದೆ” ಎಂದು ವಿಭೂತಿಖಂಡ್ ನ ಸಹಾಯಕ ಪೊಲೀಸ್ ಆಯುಕ್ತ ರಾಧಾರಮಣ್ ಸಿಂಗ್ ತಿಳಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ಸದಾಫ್ ತೀವ್ರ ಕೆಲಸದ ಒತ್ತಡಕ್ಕೆ ತುತ್ತಾಗಿದ್ದರು ಎಂದು ಅವರ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ. ಅತಿಯಾದ ಕೆಲಸದ ಒತ್ತಡ ತಾಳಲಾರದೆ ಯುವ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಕುರಿತು ದೇಶವ್ಯಾಪಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಸದಾಫ್ ಸಾವು ಸಂಭವಿಸಿದೆ. ಇದರಿಂದ ಕೆಲಸದ ಸ್ಥಳಗಳಲ್ಲಿನ ಒತ್ತಡದ ಕುರಿತ ಚರ್ಚೆ ಮತ್ತಷ್ಟು ಕಾವೇರಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News