×
Ad

ಉತ್ತರಾಖಂಡ | ಭಾರೀ ಮಳೆಗೆ ಸೇತುವೆಗೆ ಹಾನಿ : 83 ರಸ್ತೆಗಳು ಬಂದ್

Update: 2025-08-03 20:22 IST

Photo | hindustantimes

ಡೆಹ್ರಾಡೂನ್: ಕಳೆದ 24 ಗಂಟೆಗಳಲ್ಲಿ ಉತ್ತರಾಖಂಡದಲ್ಲಿ ಭಾರಿ ಮಳೆಯಾಗಿದ್ದು, ಬದರಿನಾಥ್ ಹೆದ್ದಾರಿಯಲ್ಲಿರುವ ಹನುಮಾನ್ ಚಟ್ಟಿ ಸೇತುವೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಭೂಕುಸಿತದಿಂದ ಕನಿಷ್ಠ 83 ರಸ್ತೆಗಳನ್ನು ಬಂದ್ ಮಾಡಲಾಗಿದೆ.

ಹರಿದ್ವಾರದ ವಿಷ್ಣುಪ್ರಯಾಗ್ ಬ್ಯಾರೇಜ್‌ನಿಂದ ಅಲಕನಂದಾ ನದಿಗೆ ನೀರು ಬಿಡುಗಡೆ ಮಾಡಿದ ನಂತರ ಪ್ರವಾಹದ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ.

ಕಣಿವೆ ಬಳಿ ಪ್ರದೇಶಗಳು ಸೇರಿದಂತೆ ಮೇಲ್ಭಾಗದಲ್ಲಿ ಭಾರೀ ಮಳೆಯಾದ ಕಾರಣ ಹನುಮಾನ್ ಚಟ್ಟಿ ಸೇತುವೆಯ ಎರಡೂ ಬದಿಗಳಲ್ಲಿನ ಆಧಾರ ಗೋಡೆ ಮತ್ತು ಸುರಕ್ಷತಾ ಗೋಡೆ ಕೊಚ್ಚಿಹೋಗಿವೆ.

ಭೂಕುಸಿತದಿಂದಾಗಿ 83 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅವುಗಳಲ್ಲಿ ಲೋಕೋಪಯೋಗಿ ಇಲಾಖೆ ಅಡಿಯಲ್ಲಿನ  24 ರಸ್ತೆಗಳು ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ಗ್ರಾಮೀಣ ಇಲಾಖೆಗೆ ಸೇರಿದ 52 ರಸ್ತೆಗಳು ಸೇರಿವೆ. ಪಿಥೋರಗಢದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 25 ರಸ್ತೆಗಳು ಬಂದ್ ಆಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News