×
Ad

ನೂತನ ಸಂಸತ್ ಭವನದಲ್ಲಿ ಉಪ ರಾಷ್ಟ್ರಪತಿಗಳಿಂದ ಧ್ವಜಾರೋಹಣ

Update: 2023-09-17 11:05 IST

Photo: PTI 

ಹೊಸದಿಲ್ಲಿ : ನೂತನ ಸಂಸತ್ ಭವನದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ರವಿವಾರ ರಾಷ್ಟ್ರಧ್ವಜಾರೋಹಣ ಮಾಡಿದರು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಹೊಸ ಸಂಸತ್ತಿನ ಕಟ್ಟಡದ ʼಗಜ ದ್ವಾರʼದ ಮೇಲೆ ಧ್ವಜಾರೋಹಣ ಮಾಡಿದರು.

ಐದು ದಿನಗಳ ಸಂಸತ್ ಅಧಿವೇಶನ ಸೋಮವಾರ ಪ್ರಾರಂಭವಾಗುವ ಒಂದು ದಿನದ ಮೊದಲು ಧ್ವಜಾರೋಹಣ ಸಮಾರಂಭ ನಡೆಯುತ್ತಿರುವುದು ಸಂಸತ್ತಿನ ಕಾರ್ಯ ಕಲಾಪಗಳು ಹೊಸ ಕಟ್ಟಡಕ್ಕೆ ಬದಲಾಗುವ ನೀರೀಕ್ಷೆ ಹೆಚ್ಚಿಸಿದೆ.

ಇದಕ್ಕೂ ಮೊದಲು, ಸಿಆರ್‌ಪಿಎಫ್‌ನ ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್‌ನಿಂದ ಉಪರಾಷ್ಟ್ರಪತಿ ಮತ್ತು ಬಿರ್ಲಾ ಅವರಿಗೆ ಪ್ರತ್ಯೇಕವಾಗಿ ಗೌರವ ವಂದನೆ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News