×
Ad

ಪರಿಸರ ಶಿಕ್ಷಣಕ್ಕೆ ಸಂಬಂಧಿಸಿದ ಜಗತ್ತಿನ ಅಗ್ರ ವಿ.ವಿ.ಗಳ ಪಟ್ಟಿಯಲ್ಲಿ ಬೆಂಗಳೂರು ಐಐಎಸ್‌ಸಿಗೆ ಸ್ಥಾನ

Update: 2024-12-10 23:43 IST

PC : linkedin/Indian Institute of Science (IISc)

ಹೊಸದಿಲ್ಲಿ: ಪರಿಸರ ಶಿಕ್ಷಣಕ್ಕೆ ಸಂಬಂಧಿಸಿದ ಜಗತ್ತಿನ 50 ಅಗ್ರ ಶಿಕ್ಷಣ ಸಂಸ್ಥೆಗಳಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನಗಳ ಸಂಸ್ಥೆ (ಐಐಎಸ್‌ಸಿ) ಸ್ಥಾನ ಪಡೆದುಕೊಂಡಿದೆ ಎಂದು ಮಂಗಳವಾರ ಪ್ರಕಟಿಸಲಾದ ಕ್ಯುಎಸ್ ಶ್ರೇಯಾಂಕ ಪಟ್ಟಿ ತಿಳಿಸಿದೆ.

ಸುಸ್ಥಿರತೆಗೆ ಸಂಬಂಧಿಸಿದ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ದಿಲ್ಲಿಯ ಐಐಟಿ ಅಗ್ರ ಸ್ಥಾನದಲ್ಲಿದೆ. ಅದು ಜಾಗತಿಕ ಮಟ್ಟದ 255 ಸಂಸ್ಥೆಗಳಲ್ಲಿ 171ನೇ ಸ್ಥಾನವನ್ನು ಪಡೆದುಕೊಂಡಿದೆ.

2025ರ ಕ್ಯುಎಸ್ ಸುಸ್ಥಿರತೆಯ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಒಟ್ಟು 78 ವಿಶ್ವವಿದ್ಯಾನಿಲಯಗಳು ಸ್ಥಾನ ಪಡೆದುಕೊಂಡಿವೆ. ಇದರಲ್ಲಿ ದೇಶದ ಒಟ್ಟು 10 ಅಗ್ರ ವಿಶ್ವವಿದ್ಯಾನಿಲಯಗಳಲ್ಲಿ 9 ವಿ.ವಿ.ಗಳು ತಮ್ಮ ಶ್ರೇಯಾಂಕವನ್ನು ಈ ವರ್ಷ ಸುಧಾರಿಸಿಕೊಂಡಿವೆ. ಅಲ್ಲದೆ, 21 ನೂತನ ಸಂಸ್ಥೆಗಳು ಸೇರ್ಪಡೆಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News