×
Ad

ಬಿಜೆಪಿಯ ಸುವೇಂದು ಅಧಿಕಾರಿಯಿಂದ ರಾಹುಲ್ ವಿರುದ್ಧ ಅಸಭ್ಯ ಹೇಳಿಕೆ ; ದೂರು ದಾಖಲು

Update: 2024-01-29 20:40 IST

ಸುವೇಂದು | Photo: PTI  

ಕೋಲ್ಕತಾ : ರಾಹುಲ್ ಗಾಂಧಿಯವರ ವಿರುದ್ಧ ಅಸಭ್ಯ ಹೇಳಿಕೆಗಾಗಿ ಬಿಜೆಪಿ ಶಾಸಕ ಹಾಗೂ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ವಿರುದ್ಧ ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕವು ಪೋಲಿಸ್ ದೂರು ದಾಖಲಿಸಿದೆ. ಪಕ್ಷವು ಅಧಿಕಾರಿಯಿಂದ ಬೇಷರತ್ ಕ್ಷಮೆಯಾಚನೆಗೂ ಆಗ್ರಹಿಸಿದೆ.

ರವಿವಾರ ರಾಹುಲ್ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವೇಳೆ ಅಸಭ್ಯ ಶಬ್ದವನ್ನು ಬಳಸಿದ್ದಕ್ಕಾಗಿ ಅಧಿಕಾರಿ ಟೀಕೆಗೆ ಗುರಿಯಾಗಿದ್ದಾರೆ.

‘ಕಳೆದ ನಾಲ್ಕು ದಿನಗಳಿಂದಲೂ ನಾನು ರಾಹುಲ್ ಗಾಂಧಿಯವರ ಕುರಿತು ಕೇಳುತ್ತಿದ್ದೇನೆ. ಅವರು ಯಾರು? ತಾನು ಬೆಳಿಗ್ಗೆ ಚಹಾ ತಯಾರಿಸಲು ಸ್ಟವ್ ಮೇಲೆ ಕಲ್ಲಿದ್ದಲು ತುಂಡುಗಳನ್ನು ಇಡುತ್ತೇನೆ ಎಂದು ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು. ಇದು ನನ್ನ ತಿಳುವಳಿಕೆಗೆ ಮೀರಿದ ವಿಷಯವಾಗಿದೆ’ ಎಂದು ಹೇಳಿದ್ದ ಅಧಿಕಾರಿ ಈ ವೇಳೆ ರಾಹುಲ್ ವಿರುದ್ಧ ಅಸಭ್ಯ ಪದವನ್ನು ಬಳಸಿದ್ದರು.

ರಾಹುಲ್ ವಿರುದ್ಧ ಅಸಭ್ಯ ಪದದ ಬಳಕೆಗಾಗಿ ಟಿಎಂಸಿ ಕೂಡ ಅಧಿಕಾರಿಯನ್ನು ತರಾಟೆಗೆತ್ತಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News