×
Ad

ʼಬಹಿಷ್ಕರಿಸಲ್ಪಟ್ಟʼ ಟಿವಿ ನಿರೂಪಕರ ಪಟ್ಟಿ ಬಿಡುಗಡೆ ಮಾಡಿದ ಇಂಡಿಯಾ ಮೈತ್ರಿಕೂಟ

Update: 2023-09-14 21:53 IST

Photo: ANI

ಹೊಸದಿಲ್ಲಿ: ಆಡಳಿತ ಬಿಜೆಪಿಗೆ ಹತ್ತಿರದವರೆನ್ನಲಾದ ಟಿವಿ ನಿರೂಪಕರು ನಡೆಸುವ ಟಿವಿ ಚರ್ಚಾ ಕಾರ್ಯಕ್ರಮಗಳಿಗೆ ತನ್ನ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಇಂದು ಹೇಳಿದೆ.

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ನಿವಾಸದಲ್ಲಿ ಮೈತ್ರಿಕೂಟದ ಸಮನ್ವಯ ಸಮಿತಿ ಸಭೆಯ ನಂತರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌ ಮೇಲಿನ ಘೋಷಣೆ ಮಾಡಿದರು.

“ಸಮನ್ವಯ ಸಮಿತಿಯು ಮಾಧ್ಯಮದ ಕುರಿತಾದ ಉಪಗುಂಪು ಯಾವ ರೂಪಕರ ಕಾರ್ಯಕ್ರಮಕ್ಕೆ ಇಂಡಿಯಾ ಮೈತ್ರಿಕೂಟ ತನ್ನ ಪ್ರತಿನಿಧಿಗಳನ್ನು ಕಳುಹಿಸಬಾರದು ಎಂಬ ಕುರಿತು ನಿರ್ಧರಿಸಲಿದೆ,” ಎಂದು ಅವರು ಹೇಳಿದರು.

ʼಬಹಿಷ್ಕರಿಸಲ್ಪಟ್ಟʼ ನಿರೂಪಕರ ಪಟ್ಟಿಯನ್ನು ಕಾಂಗ್ರೆಸ್ ನಾಯಕ ಪವನ್ ಖೇರಾ ಬಿಡುಗಡೆ ಮಾಡಿದ್ದಾರೆ

1. ಅದಿತಿ ತ್ಯಾಗಿ

2. ಅಮನ್ ಚೋಪ್ರಾ

3. ಅಮಿಶ್ ದೇವಗನ್

4. ಆನಂದ ನರಸಿಂಹನ್

5. ಅರ್ನಬ್ ಗೋಸ್ವಾಮಿ

6. ಅಶೋಕ್ ಶ್ರೀವಾಸ್ತವ್

7. ಚಿತ್ರಾ ತ್ರಿಪಾಠಿ

8. ಗೌರವ್ ಸಾವಂತ್

9. ನಾವಿಕ ಕುಮಾರ್

10. ಪ್ರಾಚಿ ಪರಶರ್

11. ರೂಬಿಕಾ ಲಿಯಾಕತ್

12. ಶಿವ ಆರೂರ್

13. ಸುಧೀರ್ ಚೌಧರಿ

14. ಸುಶಾಂತ್ ಸಿನ್ಹಾ

15.ಪರಾಶರ್


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News